ಸರಗಳ್ಳತನ ಆರೋಪಿ ಬಂಧನ: 29 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

Update: 2018-12-05 14:19 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.5: ಸರಗಳ್ಳತನ ಆರೋಪದಡಿ ಶಿವರಾಜ್ ರುದ್ರಯ್ಯ ಹಿರೇಮಠ್ ಎಂಬಾತನನ್ನು ಬಂಧಿಸಿರುವ ಕೆಂಗೇರಿ ಠಾಣಾ ಪೊಲೀಸರು, 29 ಲಕ್ಷ, 11 ಸಾವಿರ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಗದಗ ಜಿಲ್ಲೆಯ ದೋಣಿ ಗ್ರಾಮದ ಶಿವರಾಜ್ ರುದ್ರಯ್ಯ ಹಿರೇಮಠ್(29) ನೀಡಿದ ಮಾಹಿತಿಯಾಧರಿಸಿ ಕಳವು ಮಾಡಿದ ಚಿನ್ನ-ಬೆಳ್ಳಿ ಆಭರಣಗಳನ್ನು ಖರೀದಿಸುತ್ತಿದ್ದ ಗದಗ್‌ನ ಮಧುರೈ ಓಣಿಯ ಸುನಿಲ್(24) ಹಾಗೂ ಅನಿಲ್(22)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಯಿಂದ 29 ಲಕ್ಷ 11 ಸಾವಿರ ರೂ. ಮೌಲ್ಯದ 937 ಗ್ರಾಂ ತೂಕದ ಚಿನ್ನಾಭರಣಗಳು, ಅಪಾರ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡು, 12 ಸರ ಅಪಹರಣ, 9 ಕನ್ನಗಳವು, 2 ಮನೆಗಳವು ಸೇರಿ 12 ಪ್ರಕರಣಗಳು ಸೇರಿ ಒಟ್ಟಾರೆ 75 ಪ್ರಕರಣಗಳಲ್ಲಿ ಆರೋಪಿಯು ಭಾಗಿಯಾಗಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News