ಹನೂರು: ಅಂಬರೀಷ್ ಗೆ ಭಾವಪೂರ್ಣ ಶ್ರದ್ಧಾಂಜಲಿ, ಅನ್ನಸಂತರ್ಪಣೆ
ಹನೂರು,ಡಿ.5: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಹಿರಿಯ ರಾಜಕಾರಣಿ ಅಂಬರೀಶ್‍ರ 11 ನೇ ದಿನದ ಪುಣ್ಯತಿಥಿ ಅಂಗವಾಗಿ ಹನೂರು ಪಟ್ಟಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿಲಾಗಿತ್ತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಒಕ್ಕಲಿಗ ಯುವ ಬಳಗ, ಕಲ್ಕಿ ಬಾಯ್ಸ್ ಮತ್ತು ಹನೂರು ಅಂಬಿ ಅಭಿಮಾನಿಗಳು ಅಂಬರೀಶ್ ಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿ, ವಿವಿಧ ರೀತಿಯಲ್ಲಿ ತಿಂಡಿ ತಿನಿಸು, ಹಣ್ಣು ಹಂಪಲು ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಅಂಭಿ ಭಾವಚಿತ್ರದ ಮುಂದಿಟ್ಟು ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಅನ್ನದಾನ ಮಾಡಿದರು.
ಅಂಬರೀಷ್ ರವರ ಬ್ಯಾನರ್, ಭಾವ ಚಿತ್ರಗಳಿಗೆ ವಿಶೇಷ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಗೌರವವನ್ನು ಸೂಚಿಸಿದರು. ಅಂಬರೀಷ್ ನಟಿಸಿರುವ ಚಲನ ಚಿತ್ರ ಗೀತೆಗಳನ್ನು ಧ್ವನಿವರ್ಧಕದ ಮೂಲಕ ಕೇಳುವ ಮೂಲಕ ಅವರ ನೆನಪುಗಳನ್ನು ಮೆಲಕು ಹಾಕುವಂತೆ ಮಾಡಿದರು.
ಬನ್ನಿ ಮಂಟಪ ಬೀದಿಯಲ್ಲಿ ಅನ್ನ ಸಂತರ್ಪಣೆ: ಬಡಾವಣೆಯ ಯುವಕರು ರೆಬಲ್‍ಸ್ಟಾರ್ ಅಂಬರೀಷ್‍ರವರ ಆರಾಧನೆ ಸ್ಮರಣಾರ್ಥ ಮಜ್ಜಿಗೆ, ಪಾನಕ, ಸಿಹಿ ಪೊಂಗಲ್, ಪುಳಿಯೋಗರೆಯನ್ನು ವಿತರಿಸಿದರು.