ಹನೂರು: ಜಿಂಕೆಯ ಕೊಂಬು ಶೇಖರಣೆ; ಆರೋಪಿ ಬಂಧನ
Update: 2018-12-05 22:37 IST
ಹನೂರು,ಡಿ.5: ತಾಲೂಕಿನ ಮಂಚಾಪುರ ಗ್ರಾಮದಲ್ಲಿ ಅಕ್ರಮವಾಗಿ ಜಿಂಕೆಯ ಕೊಂಬನ್ನು ಶೇಖರಿಸಿದ ವ್ಯಕ್ತಿಯನ್ನು ಜಿಲ್ಲೆಯ ಡಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೀರ ಎಂಬಾತ ಬಂಧಿತ ಆರೋಪಿ. ಈತ ತನ್ನ ನಿವಾಸದ ಹಿಂಭಾಗದಲ್ಲಿ ಜಿಂಕೆಯ ಕೊಂಬನ್ನು ಅಕ್ರಮವಾಗಿ ಸಂಗ್ರಹಿಸಿದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲೆಯ ಡಿಸಿಬಿಯ ಆರಕ್ಷಕ ರವೀಂದ್ರ ಅವರ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಕೊಂಬನ್ನು ವಶಪಡಿಸಿ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದರು.