ಬಿಹಾರದ ಕಾಂಗ್ರೆಸ್ ಸಂಸದ ಮೌಲಾನ ಅಸ್ರಾರ್ ಉಲ್ ಹಕ್ ಕಾಸ್ಮಿ ವಿಧಿವಶ

Update: 2018-12-07 05:03 GMT

ಪಾಟ್ನಾ, ಡಿ.7: ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮತ್ತು  ಬಿಹಾರದ  ಕಾಂಗ್ರೆಸ್ ಸಂಸದ ಮೌಲಾನ  ಅಸ್ರಾರ್ ಉಲ್ ಹಕ್ ಕಾಸ್ಮಿ  ಹೃದಯಾಘಾತದಿಂದ ಶುಕ್ರವಾರ ಬೆಳಗ್ಗಿನ ಜಾವ ನಿಧನರಾದರು.

ಅವರಿಗೆ 76 ವರ್ಷ ವಯಸ್ಸಾಗಿತ್ತು.

ಬಿಹಾರದ ಕಿಸಾನ್ ಗಂಜ್ ಲೋಕಸಭಾ ಕ್ಷೇತ್ರದಿಂದ 2009 ಮತ್ತು 2014ರಲ್ಲಿ ಸತತ ಎರಡು ಬಾರಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆ ಆಗಿದ್ದರು. ಇದಕ್ಕೂ ಮೊದಲು ಐದು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರೂ ಅವರಿಗೆ ಲೋಕಸಭೆ ಪ್ರವೇಶಿಸಲು  ಸಾಧ್ಯವಾಗಿರಲಿಲ್ಲ.  2009ರಲ್ಲಿ ಮೊದಲ ಬಾರಿ  ಲೋಕಸಭೆ ಪ್ರವೇಶಿಸಿದ್ದರು.

2014ರಲ್ಲಿ ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್ ಜೈಸ್ವಾಲ್  ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸಿ ಎರಡನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು.

 ಅಸ್ರಾರ್ ಉಲ್ ಹಕ್ ಕಾಸ್ಮಿ ಅವರು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ  ಸದಸ್ಯರಾಗಿದ್ದರು ಮತ್ತು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ನ  ಸ್ಥಾಪಕ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News