ಬಿಜೆಪಿಯದ್ದು ಮುಸ್ಲಿಮ್ ವಿರೋಧಿ, ಪಾಕ್ ವಿರೋಧಿ ದೃಷ್ಟಿಕೋನ: ಇಮ್ರಾನ್ ಖಾನ್

Update: 2018-12-08 04:02 GMT

ಇಸ್ಲಾಮಾಬಾದ್, ಡಿ.8: ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ದೃಷ್ಟಿಕೋನ ಮುಸ್ಲಿಂ ವಿರೋಧಿ ಹಾಗೂ ಪಾಕಿಸ್ತಾನ ವಿರೋಧಿ ಎಂದು ಪ್ರಧಾನಿ ಇಮ್ರಾನ್ ಖಾನ್ ವಿಶ್ಲೇಷಿಸಿದ್ದಾರೆ.

ಉಭಯ ದೇಶಗಳ ನಡುವೆ ಸ್ಥಗಿತಗೊಂಡಿರುವ ದ್ವಿಪಕ್ಷೀಯ ಮಾತುಕತೆಗಳು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆ ಬಳಿಕ ಪುನರಾರಂಭವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಹಿತಾಸಕ್ತಿ ಕಾಪಾಡುವ ಸಲುವಾಗಿ 2008ರ ಮುಂಬೈ ದಾಳಿಕೋರರ ವಿರುದ್ಧ ಕ್ರಮಕ್ಕೆ ತಮ್ಮ ಸರ್ಕಾರ ಉತ್ಸುಕವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಭಾರತದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಭಾರತದ ಆಡಳಿತಾರೂಢ ಪಕ್ಷ ಮುಸ್ಲಿಂ ವಿರೋಧಿ ಹಾಗೂ ಪಾಕಿಸ್ತಾನ ವಿರೋಧಿ ಧೋರಣೆ ಹೊಂದಿದೆ. ನನ್ನ ಎಲ್ಲ ಪ್ರಸ್ತಾವಗಳನ್ನು ಅದು ತಿರಸ್ಕರಿಸಿದೆ. ಬಹುಶಃ ಚುನಾವಣೆ ಬಳಿಕ ಭಾರತ ಜತೆಗಿನ ಮಾತುಕತೆ ಮುಂದುವರಿಯಬಹುದು" ಎಂದು ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ ವಿಶೇಷ ಸಂದರ್ಶನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News