ದರೋಡೆ ಹೈಡ್ರಾಮ ನಡೆಸಿ 8 ಲಕ್ಷ ಗುಳುಂ ಮಾಡಲು ಹೋದವ ಈಗ ಪೊಲೀಸರ ಅತಿಥಿ

Update: 2018-12-09 16:20 GMT

ಹಾಸನ, ಡಿ. 9: ದರೋಡೆ ಹೆಸರಿನಲ್ಲಿ 8 ಲಕ್ಷ ಗುಳಂ ಮಾಡಲು ಹೈಡ್ರಾಮ ನಡೆಸಿದ ಕೋಳಿ ಫಾರಂನಲ್ಲಿ ವ್ರೈಟರ್ ಆಗಿ ಕೆಲಸ ನಿರ್ವಹಿಸುವ ಚಂದನ್ ಈಗ ಪೊಲೀಸರ ಅತಿಥಿಯಾಗಿದ್ದು, ಈತನಿಂದ  ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಳಿ ಫಾರಂನಲ್ಲಿ ಕೆಲಸಗಾರ  ಕಳ್ಳರು ಹಣ ಕಿತ್ತುಕೊಂಡು ಹೋಗಿದ್ದಾರೆಂದು ನಾಟಕವಾಡಿ ಪೊಲೀಸರಿಗೆ ದೂರು ನೀಡಿದ ಈ ಚಾಲಾಕಿಯನ್ನು ಬಂದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದು, 7ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಸಂಚಿನ ಹಿನ್ನಲೆ:

ಹೆಸರು ಚಂದನ್,  ಇರೋ  ಬರೋ ಸಾಲವನ್ನೆಲ್ಲಾ ತೀರಿಸಿ,  ಸಿರಿವಂತನಾಗಿ ಬಿಡೋಣ  ಎಂಬ ದುರಾಸೆಯಿಂದ ಅನ್ನ ನೀಡೋ ಒಡಯನ ನಂಬಿಕೆಯನ್ನೇ ಬಡಂವಾಳವನ್ನಾಗಿಸಿಕೊಂಡು ಉಂಡ ಮನೆಗೆ ಮೂರು ಬಗೆದವನು ಈಗ ಪೊಲೀಸರ ಅಥಿತಿಯಾಗಿದ್ದಾನೆ .

ನವೆಂಬರ್ 26 ರಂದು  ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಾ ಫೀಡ್ ಕಂಪನಿಗೆ ಸೇರಿದ ಜನಿವಾರ ಹಾಗೂ ಚಿಕ್ಕಕಣಗಾಲ್ ಗ್ರಾಮದ ಕೊಳಿ ಫಾರಂಗಳಲ್ಲಿ ಕೋಳಿಗಳನ್ನು ಮಾರಾಟ ಮಾಡಿದ ಹಣವನ್ನು ತಮ್ಮ ಮನೆಯಿಂದ ಕಂಪನಿಗೆ ಕಟ್ಟಲೆಂದು ನಗರದ ಜೈಪಾಸ್ ರಸ್ತೆಯ ರೈಲ್ವೇ ಟ್ರಾಕ್ ಹತ್ತಿರ ಬೈಕಿನಲ್ಲಿ ಹಣ ತೆಗೆದುಕೊಂಡು ತೆರಳುತ್ತಿದ್ದಾಗ, ಹಿಂಬಾಲಿಸಿಕೊಂಡು ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿ ನನ್ನ ಬಳಿ ಇದ್ದ ಕಂಪನಿಗೆ ಸೇರಿದ 9.5 ಲಕ್ಷ ಹಣವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಸ್ವತಃ ಅರೋಪಿ ಚಂದನ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.

ಅನುಮಾನದ ಹಿನ್ನಲೆ ಚಂದನ್‍ನನ್ನ ತೀವ್ರ ವಿಚಾರಣೆಗೊಳಪಡಿಸಿದಾಗ ಚಂದನ್ ಮತ್ತು ತಂಡ ನಡೆಸಿದ ನಾಟಕದ ಅಸಲಿಯತ್ತು ಬಟಾಬಯಲಾಗಿದೆ.

ಶುಂಟಿ  ಬೆಳೆಯಲೆಂದು ಒಂದಿಷ್ಟು ಸಾಲ ಮಾಡಿಕೊಂಡ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದ ಚಂದನ್ ರಾತ್ರಿ ಕಳೆದು ಬೆಳಕಾಗೋ ಅಷ್ಟರಲ್ಲಿ ಇರೋ ಬರೋ ಸಾಲವನ್ನೇಲ್ಲಾ ತೀರಿಸಿ ಸಿರಿವಂತನಾಗಬೇಕೆಂಬ ದುರಾಸೆಯಿಂದ ತನ್ನ ಸ್ನೇಹಿತರಾದ ನವೀನ್ ಮತ್ತು ಕೆಂಚಲೋಕಿ ಅವರೊಂದಿಗೆ ಸಂಚು ರೂಪಿಸಿ ಎಳುವರೆ(7.5) ಲಕ್ಷ ಹಣವನ್ನು ಮನೆಯಲ್ಲಿ ಇಟ್ಟು 2 ಲಕ್ಷ ಹಣವನ್ನು ಬ್ಯಾಗಿನಲ್ಲಿಟ್ಟುಕೊಂಡು ಕಂಪನಿಗೆ ಕಟ್ಟಲು ಹೋಗುವ ಸಮಯದಲ್ಲಿ ಈ ಮೊದಲೇ ರೂಪಿಸಿದ್ದ ಸಂಚಿನಂತೆ ಚಂದನ್ ಮೇಲೆ ಅವರ ಸ್ನೇಹಿತರಿಬ್ಬರೂ ಹಲ್ಲೆ ನಡೆಸುವ ನಾಟಕವಾಡಿ ಚಂದನ್ ಬಳಿ ಇದ್ದ 2 ಲಕ್ಷ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರೆ.

ನಂತರ ಪೊಲೀಸರನ್ನು ಸುಲಭವಾಗಿ ಯಾಮಾರಿಸಬಹುದು. ನಾನೇ ಅತೀ ಬುದ್ದಿವಂತ ಎಂದುಕೊಂಡ ಚಂದನ್ ಪೊಲೀಸ್ ಠಾಣೆಗೆ ಬಂದು ಗಾಬರಿಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾನೆ, ಆದರೇ ಅನುಮಾನಗೊಂಡು ಚಂನ್ ನನ್ನೇ ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ನಡೆದ ಅಸಲೀಯತ್ತನ್ನು ಚಂದನ್  ಬಾಯಿಬಿಟಿದ್ದು, ವಿಷಯ ತಿಳಿದ  ನವೀನ್ ಹಾಗೂ ಲೋಕಿ ತಲೆ ಮರೆಸಿಕೊಂಡಿದ್ದಾರೆ, ಬಂಧಿತ ಚಂದನ್‍ನಿಂದ ಪೊಲೀಸರು 7 ಲಕ್ಷ ಹಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದು, ಒಟ್ಟರೆ ದರೋಡೆ ನಾಟಕ ಕೊನೆಗೂ  ಹೊರ ಬಂದಿದ್ದು,  2 ಲಕ್ಷ  ಕೊಂಡುಯ್ದಿರುವ ಇಬ್ಬರು ಕದಿಮರ ಬಂಧನಕ್ಕೆ ಈಗಾಗಲೇ ಬಲೆ ಬೀಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ಅವರ ಮಾಗ್ರದರ್ಶನದಲ್ಲಿ ಹಾಸನ ಉಪ ವಿಭಾಗದ ಪುಟ್ಟಸ್ವಾಮಿಗೌಡ, ಹಾಸನ ನಗರ ವೃತ್ತ ನಿರೀಕ್ಷಕ ಸತ್ಯನಾರಾಯಣ್, ಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ್ ಅವರ ತಂಡ ಪ್ರಕರಣದ ಜಾಡು ಹಿಡಿದು ಆರೋಪಿಯ ವಿರುದ್ದ ಪ್ರಕರಣದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News