ಚಾಮರಾಜನಗರ: ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದ ಮೂವರ ಬಂಧನ

Update: 2018-12-09 16:53 GMT

ಚಾಮರಾಜನಗರ, ಡಿ. 9: ತಮಿಳುನಾಡಿನ ಮೂವರು ಕಳ್ಳಿಯರು ಕೊಳ್ಳೇಗಾಲ ಪಟ್ಟಣದಲ್ಲಿ ಮಹಿಳಾ ಪೊಲೀಸರಿಗೆ ಸಿಕ್ಕಿಬಿದ್ದು, ನ್ಯಾಯಾಂಗ ಬಂದನಕ್ಕೆ ಒಳಗಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ.

ತಮಿಳುನಾಡಿನ ಸೇಲಂ ಜಿಲ್ಲೆಯ ನಿವಾಸಿ ಮಣಿಕಂಠನ್‍ನ ಇಬ್ಬರು ಹೆಂಡತಿಯರಾದ ಆರಾಯಿ ಮತ್ತು ದೇವಾಲಿ ಹಾಗೂ ರಾಜುವೇಲ್‍ನ ಪತ್ನಿ ಮಹೇಶ್ವರಿ ಬಂಧಿತ ಆರೋಪಿಗಳು. ಇವರುಗಳು ಪಟ್ಟಣದ ಬಸ್ ನಿಲ್ಧಾಣ ಮತ್ತು ಅಚ್ಗಾಳ್ ನಿವಾಸ್ ಮತ್ತು ಇತರೆ ಸ್ಥಳಗಳಲ್ಲಿ ಬಸ್ ಹತ್ತುವ ಪ್ರಯಾಣಿಕರ ಹಣ ಮತ್ತು ಪರ್ಸ್‍ಗಳನ್ನು ಎಗರಿಸಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಕರ್ತವ್ಯದಲ್ಲಿದ್ದ ಪಟ್ಟಣ ಠಾಣೆಯ ಮುಖ್ಯಪೇದೆ ಶ್ರೀಕಂಠಸ್ವಾಮಿ ಮಹಿಳಾ ಪೋಲೀಸರಾದ ತಾಯಮ್ಮ, ವೀಣಾ ಬಿರಾದರ್, ಜೀವಿತ ಇವರುಗಳು ಕರ್ತವ್ಯದಲ್ಲಿದ್ಧಾಗ ಮೂವರು ಕಳ್ಳಿಯರು ಕಳ್ಳತನ ಮಾಡಲು ಹೊಂಚು ಹಾಕುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿ ಮೂವರನ್ನು ಕರೆತಂದು ಪೋಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡುವವರೆಂಬ ಅನುಮಾನ ವ್ಯಕ್ತವಾದ ಹಿನ್ನಲೆ ಪ್ರಕರಣ ದಾಖಲು ಮಾಡಿಕೊಂಡು ಮೂವರನ್ನು ತಹಶೀಲ್ಧಾರ್ ರವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News