ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿ: ಪುಂಡಲೀಕ ರಾವ್

Update: 2018-12-09 18:00 GMT

ಕಡೂರು, ಡಿ.9: ಇಂದಿನ ಒತ್ತಡದ ಬದುಕಿನಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದು ರೋಟರಿ ಅಧ್ಯಕ್ಷ ಕೆ.ಎನ್.ಪುಂಡಲೀಕ ರಾವ್ ತಿಳಿಸಿದ್ದಾರೆ.

ಪಟ್ಟಣದ ರೋಟರಿ ಸಭಾಂಗಣದಲ್ಲಿ ಕ್ಲಬ್ ವತಿಯಿಂದ ಸ್ಪರ್ಶ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಕಾಲಕಾಲಕ್ಕೆ ತಕ್ಕಂತೆ ತಪಾಸಣೆ ನಡೆಸುವುದು ಅವಶ್ಯಕವಾಗಿದೆ. ಇದು ವಯೋಸಹಜವಾಗಿ ಬರುವ ಕಾಯಿಲೆಗಳಿಂದ ದೂರ ಉಳಿಯಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಶಿಬಿರದ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಹೇಳಿದರು.

ರೋಟರಿ ಮಾಜಿ ಅಧ್ಯಕ್ಷ ಕ.ಗೋ.ಮಂಜುನಾಥ್, ರೋಟರಿ ಸದಸ್ಯರಾದ ಬಿ. ಶಿವಕುಮಾರ್, ಎಸ್. ಕೃಷ್ಣಮೂರ್ತಿ ದ್ವಾರಕನಾಥ ಬಾಬು ಕೆ.ಎಚ್.ಶ್ರೀನಿವಾಸ್ ಎಚ್.ಕೆ.ಮಂಜುನಾಥ್, ರೋಟರಿ ಕಾರ್ಯದರ್ಶಿ ಸೂರಿ ಶ್ರೀನಿವಾಸ್, ಸ್ಪರ್ಶ ಆಸ್ಪತ್ರೆಯ ವೈದ್ಯರಾದ ಆಂಜಿ, ದಿವ್ಯಾ, ಅನುಮೋಲ್, ಕಲ್ಪನಾ, ಹರೀಶ್ ಹಾಗೂ ವ್ಯವಸ್ಥಾಪಕ ವೇಣು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News