ಜಯಪುರ: ಸಂಗೀತ ಸ್ಪರ್ಧೆಯಲ್ಲಿ ಪ್ರಥಮ
Update: 2018-12-10 18:51 IST
ಜಯಪುರ, ಡಿ.10: ತುಮಕೂರಿನಲ್ಲಿ ಡಿ.8ರಂದು ನಡೆದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಶೃಂಗೇರಿಯ ಕು.ಪಂಚಮಿಯವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಇವರು ಪಟ್ಟಣದ ಉಮಾ ಮತ್ತು ರಾಜಗೋಪಾಲ್ ದಂಪತಿ ಪುತ್ರಿಯಾಗಿದ್ದು, ಶೃಂಗೇರಿ ಭಾರತಿ ಸಂಗೀತ ಶಾಲೆಯಲ್ಲಿ ಸಾವಿತ್ರಿ ಪ್ರಭಾಕರ್ ನೈಬಿಯವರಿಂದ ಸಂಗೀತ ಅಭ್ಯಾಸ ಮಾಡಿದ್ದಾರೆ.