ಪೊರಕೆಯಿಂದ ಹೊಡೆಯುವ ವಿಡಿಯೋ ವೈರಲ್: ಮಗನನ್ನು ಕ್ಷಮಿಸಿ ಮನೆಗೆ ಕರೆದೊಯ್ದ ತಾಯಿ

Update: 2018-12-10 16:07 GMT
ಫೈಲ್ ಚಿತ್ರ

ಬೆಂಗಳೂರು,ಡಿ.10: ಹೆತ್ತ ತಾಯಿಯನ್ನೇ ಪೊರಕೆಯಲ್ಲಿ ಹೊಡೆದು ಪೊಲೀಸ್ ಠಾಣೆ ಸೇರಿದ್ದ ಮಗನನ್ನು, ತಾಯಿಯೇ ಕ್ಷಮಿಸಿ ಪೊಲೀಸರಿಂದ ಮಗನನ್ನು ಬಿಡಿಸಿಕೊಂಡು ಮನೆಗೆ ಕರೆದೊಯ್ದಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಜೆ.ಪಿ.ನಗರದಲ್ಲಿ ಮಗನಿಗೆ ಬುದ್ಧಿ ಮಾತು ಹೇಳಿದರು ಎಂಬ ಕಾರಣಕ್ಕೆ ತಾಯಿಯನ್ನು ಪೊರಕೆಯಲ್ಲಿ ಒಡೆದು ಕಿರುಕುಳ ನೀಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅನಂತರ ಮಾಧ್ಯಮಗಳಲ್ಲಿ ಈ ಚಿತ್ರ ಪ್ರಸಾರವೂ ಆಗಿತ್ತು. ಇದನ್ನು ಕಂಡ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಮಗನನ್ನು ಠಾಣೆಗೆ ಕರೆತಂದಿದ್ದರು.

ದೂರು ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ತಾಯಿಯನ್ನು ರವಿವಾರ ರಾತ್ರಿ ಠಾಣೆಗೆ ಕರೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಎದುರು ಕಣ್ಣೀರು ಹಾಕಿದ ತಾಯಿ ‘ನನ್ನ ಮಗನಿಗೆ ನಾನೇ ಬುದ್ಧಿ ಹೇಳುತ್ತೇನೆ, ದಯವಿಟ್ಟು ಅವನನ್ನು ಬಿಟ್ಟು ಬಿಡಿ’ ಎಂದು ಬೇಡಿಕೊಂಡಿದ್ದಾರೆ. ತಾಯಿಯ ಮನವಿಗೆ ಸ್ಪಂದಿಸಿದ ಪೊಲೀಸರು ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News