ಚೆಕ್ ಬೌನ್ಸ್ ಪ್ರಕರಣ: ಬಾಕಿ ಮೊತ್ತ ಪಾವತಿಸಲು ನಿರ್ಮಾಪಕ ದ್ವಾರಕೀಶ್‌ಗೆ ನ್ಯಾಯಾಲಯ ಆದೇಶ

Update: 2018-12-10 17:46 GMT

ಬೆಂಗಳೂರು, ಡಿ.10: ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಸಂಕಷ್ಟ ಎದುರಾಗಿದೆ. ದ್ವಾರಕೀಶ್ ವಿರುದ್ಧ ಸಲ್ಲಿಸಲಾಗಿದ್ದ ದೂರಿನ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದ್ವಾರಕೀಶ್ ವಿರುದ್ಧ ತೀರ್ಪು ನೀಡಿದೆ.

ಕನ್ನಡ ಚಿತ್ರರಂಗದ ಮತ್ತೊಬ್ಬ ನಿರ್ಮಾಪಕರಾದ ಕೆಸಿಎನ್ ಚಂದ್ರಶೇಖರ್ ಅವರು ಕೊಟ್ಟ ದೂರಿನ ಮೇರೆಗೆ 21ನೆ ಎಸಿಎಂಎಂ ನ್ಯಾಯಾಲಯವು ಸೋಮವಾರ ವಿಚಾರಣೆ ನಡೆಸಿ, ಕೆಸಿಎನ್ ಚಂದ್ರಶೇಖರ್ ಅವರಿಗೆ ಬಾಕಿ ಮೊತ್ತ ಪಾವತಿಸುವಂತೆ ಆದೇಶ ನೀಡಿದೆ. ಹಣ ನೀಡಲು ತಪ್ಪಿದಲ್ಲಿ 1 ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.

ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿದ್ದ ಚಾರುಲತಾ ಚಿತ್ರದ ನಿರ್ಮಾಣಕ್ಕಾಗಿ ದ್ವಾರಕೀಶ್ 50 ಲಕ್ಷ ರೂ.ಸಾಲ ಪಡೆದಿದ್ದರಂತೆ. ಈ ಸಂಬಂಧ ಅವರು ಆಂಧ್ರ ಬ್ಯಾಂಕ್‌ನ 52 ಲಕ್ಷದ ಚೆಕ್ ಕೆಸಿಎನ್ ಚಂದ್ರಶೇಖರ್ ಅವರಿಗೆ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದೆ ಎಂದು ಚಂದ್ರಶೇಖರ್ ಕೋರ್ಟ್ ಮೆಟ್ಟಿಲೇರಿದ್ದರು. ದ್ವಾರಕೀಶ್ ನಿರ್ಮಾಣದ ಚಾರುಲತಾ ಚಿತ್ರ ನಿರೀಕ್ಷೆಗಳೆಲ್ಲವನ್ನೂ ತಲೆಕೆಳಗೆ ಮಾಡಿತ್ತು. ಥಾಯ್ ಭಾಷೆಯ ’ಅಲೋನ್’ ಚಿತ್ರವನ್ನು ಅವರು ’ಚಾರುಲತಾ’ ಮಾಡಿದ್ದರು. ಆದರೆ, ಚಿತ್ರ ಕೈಕೊಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News