102 ವರ್ಷದ ಸ್ಕೈಡೈವರ್ ಅಜ್ಜಮ್ಮ!

Update: 2018-12-12 18:17 GMT

ಸಿಡ್ನಿ: 102 ವರ್ಷದ ಅಜ್ಜಿಯೊಬ್ಬರು ದಕ್ಷಿಣ ಆಸ್ಟ್ರೇಲಿಯದ ಆಕಾಶದಲ್ಲಿ 14,000 ಅಡಿ ಎತ್ತರದಿಂದ ಜಿಗಿಯುವ ಮೂಲಕ ಜಗತ್ತಿನ ಸಂಭಾವ್ಯ ಅತಿ ಹಿರಿಯ ‘ಸ್ಕೈಡೈವರ್’ ಆಗಿದ್ದಾರೆ. ಗಂಟೆಗೆ 220 ಕಿಲೋಮೀಟರ್ ವೇಗದಲ್ಲಿ ಕೆಳಗೆ ಧಾವಿಸುತ್ತಿದ್ದಾಗ ಹಿರಿಯಜ್ಜಿಯ ಕೆನ್ನೆಗಳು ಜೋರಾಗಿ ಬಡಿದುಕೊಳ್ಳುತ್ತಿದ್ದವು. ‘‘ಈ ಯಾನದ ವೇಳೆ ನಾನು ಸಾಮಾನ್ಯ ರೀತಿಯಲ್ಲಿಯೇ ಇದ್ದೆ’’ ಎಂದು ಧೀರ ಅಜ್ಜಿ ಐರೀನ್ ಓ’ಶೀ ಬಳಿಕ ಹೇಳಿದರು. ತನ್ನ 100ನೇ ಹುಟ್ಟುಹಬ್ಬದ ದಿನದಂದು 2016ರಲ್ಲಿ ಅವರು ಮೊದಲ ಸ್ಕೈಡೈವ್ ಮಾಡಿದ್ದರು. ಆದರೆ, ಅವರಿಗೆ ಇತಿಹಾಸದ ಪುಸ್ತಕದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದು ರವಿವಾರದಂದು 102 ವರ್ಷ ಮತ್ತು 194 ದಿನಗಳ ಪ್ರಾಯದ ಅಜ್ಜಿ ನಡೆಸಿದ ಯಶಸ್ವಿ ಆಕಾಶ ಹಾರಾಟ ಎಂದು ಸಂಘಟಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor