ಬೆಂಬಲ ಬೆಲೆಗೆ ರೈತರು ನೋಂದಣಿ ಮಾಡುವಾಗ ಪ್ರಮಾಣ ಪತ್ರ ಬೇಕಿಲ್ಲ: ಸಚಿವ ಝಮೀರ್

Update: 2018-12-13 15:55 GMT

ಬೆಳಗಾವಿ, ಡಿ.13: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗಾಗಿ ರೈತರು ನೋಂದಣಿ ಮಾಡುವಾಗ ಪ್ರಮಾಣ ಪತ್ರ ಕೊಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಝಮೀರ್ ಅಹಮ್ಮದ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭತ್ತ ಬೆಳೆಗಾರರು ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‍ಎಸ್‍ಸಿ ಕೋಡ್, ಮೊಬೈಲ್ ನಂಬರ್ ಮಾತ್ರ ಕೊಟ್ಟು ನೋಂದಣಿ ಮಾಡಿಸಿಕೊಳ್ಳಬಹುದು. ಆದರೆ,  ಮೇಲ್ಕಂಡ ದಾಖಲೆ ಹೊರತುಪಡಿಸಿ ಇತರೆ ಯಾವುದೇ ದಾಖಲೆಗಳನ್ನು ಖರೀದಿ ಕೇಂದ್ರಗಳಲ್ಲಿ ರೈತರ ಬಳಿ ಕೇಳುವಂತಿಲ್ಲ ಎಂದು ತಿಳಿಸಿದರು.

ರಾಜ್ಯದ ಕೆಲವೆಡೆ ಭತ್ತ ಖರೀದಿಗಾಗಿ ರೈತರು ನೋಂದಣಿ ಮಾಡಿಸಲು ಬಂದಾಗ ಅನಗತ್ಯ ದಾಖಲೆ ಕೇಳಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳಿವೆ.  ಈ ರೀತಿ ದಾಖಲೆ ಹೊರತುಪಡಿಸಿ ಬೇರೆ ದಾಖಲೆ ಕೇಳಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News