ಬಯಲು ರಂಗ ಮಂದಿರಗಳು ಕಾರ್ಯನಿರ್ವಹಿಸಲು ಸೂಕ್ತ ಕ್ರಮ: ಸಚಿವೆ ಜಯಮಾಲಾ

Update: 2018-12-13 16:40 GMT

ಬೆಳಗಾವಿ,ಡಿ.13: ರಾಜ್ಯಾದ್ಯಂತ ಮಂಜೂರು ಮಾಡಿರುವ ಬಯಲು ರಂಗಮಂದಿರಗಳು ಕಾರ್ಯ ನಿರ್ವಹಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವೆ ಡಾ.ಜಯಮಾಲ ತಿಳಿಸಿದರು.

ಗುರುವಾರ ವಿಧಾನಪರಿಷತ್‍ನಲ್ಲಿ ಸದಸ್ಯ ಕೆ.ಸಿ.ಕೊಂಡಯ್ಯ ಪರವಾಗಿ ಶರಣಪ್ಪ ಮತ್ತೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರ, ಕೆಲವು ಕಡೆ ಬಯಲು ರಂಗಮಂದಿರಗಳು ಕಾರ್ಯ ನಿರ್ವಹಿಸಲು ಕಾನೂನಿನ ತೊಡಕಾಗಿದೆ. ಎಲ್ಲಿ ಕಾಮಗಾರಿ ಪೂರ್ಣಗೊಂಡಿದೆಯೋ ಅಲ್ಲಿ ಕಾರ್ಯಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಸಣ್ಣಪುಟ್ಟ ತೊಡಕುಗಳಿದ್ದರೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದಾದ್ಯಂತ ಒಟ್ಟು160 ಬಯಲು ರಂಗಮಂದಿರಗಳಿವೆ. ಇದರಲ್ಲಿ 24 ರಂಗಮಂದಿರಗಳು ಪೂರ್ಣಗೊಂಡಿದ್ದರೆ 76 ರಂಗಮಂದಿರಗಳ ಕಾಮಗಾರಿ ನಡೆಯುತ್ತಿದೆ. ಉಳಿದ 69 ರಂಗಮಂದಿರಗಳಿಗೆ ಕಾನೂನಿನ ತೊಡಕು ಎದುರಾಗಿದೆ. ಸರಕಾರದ ವತಿಯಿಂದ ಒಂದೊಂದು ರಂಗಮಂದಿರಗಳಿಗೆ 10ರಿಂದ 20 ಲಕ್ಷ ಅನುದಾನ ನೀಡಲಾಗುತ್ತಿದೆ. ಕೆಲವರು ದೊಡ್ಡ ಮಟ್ಟಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News