×
Ad

ಹಾಸನ: ಕುಡಿದು ವಾಹನ ಓಡಿಸುವವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

Update: 2018-12-13 23:39 IST

ಹಾಸನ, ಡಿ.13: ನಗರದೆಲ್ಲೆಡೆ ಕುಡಿದು ವಾಹನ ಓಡಿಸುತ್ತಿದ್ದ 36 ದ್ವಿಚಕ್ರ ವಾಹನ ಮತ್ತು 3 ಕಾರು ವಶಪಡಿಸಿಕೊಂಡಿರುವ ಪೊಲೀಸರು ದಂಡ ವಿಧಿಸಿದ್ದಾರೆ.

ನಗರದ ಹೊಸಲೈನ್ ರಸ್ತೆಯಲ್ಲಿರುವ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ಎಂ.ಜಿ. ರಸ್ತೆ, ಬಿ.ಎಂ.ರಸ್ತೆ, ತಣ್ಣೀರುಹಳ್ಳ, ಸಾಲಗಾಮೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಚಾಲಕರ ತಪಾಸಣೆ ಒಳಪಡಿಸಿದಾಗ ಕುಡಿದು ವಾಹನ ಓಡಿಸುತ್ತಿರುವುದು ಕಂಡು ಬಂದಿತು. ವಾಹನವನ್ನು ವಶಪಡಿಸಿಕೊಂಡು ದಂಡವನ್ನು ತಾವು ಕಟ್ಟಿಸಿಕೊಳ್ಳದೇ ನ್ಯಾಯಾಲಯದಲ್ಲಿ ಕಟ್ಟಲು ನಿರ್ದೇಶನ ನೀಡಲಾಗಿದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಈಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಆರೋಕಿಯಪ್ಪ, ಎಸ್.ರೇಣುಕಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News