ಮೈಸೂರು: ಅರಣ್ಯದಂಚಿನಲ್ಲಿ ಅಳವಡಿಸಿದ್ದ ಕಬ್ಬಿಣದ ಕಂಬಿಗೆ ಸಿಲುಕಿ ಆನೆ ಸಾವು

Update: 2018-12-15 15:04 GMT

ಮೈಸೂರು,ಡಿ.15: ಜಿಲ್ಲೆಯ ಹುಣಸೂರು ಅರಣ್ಯ ವ್ಯಾಪ್ತಿಗೆ ಬರುವ ವೀರನ ಹೊಸಹಳ್ಳಿ ಅರಣ್ಯದ ಅಂಚಿನಲ್ಲಿ ಅಳವಡಿಸಿದ್ದ ಕಂಬಿಗಳಿಗೆ ಶನಿವಾರ ಬೆಳಗ್ಗಿನ ಜಾವ ಗಂಡು ಆನೆಯೊಂದು ಕಾಲುಗಳನ್ನು ಸಿಲುಕಿಸಿಕೊಂಡು ಅಲ್ಲಿಂದ ಬಿಡಿಸಿಕೊಳ್ಳಲಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಆಗಮಿಸಿ ರೈತರ ಬೆಳೆಗಳನ್ನು ಹಾಳು ಮಾಡಬಾರದೆಂದು ಅಳವಡಿಸಲಾಗುವ ಕಬ್ಬಿಣದ ಕಂಬಿಗಳು ಇದೀಗ ಪ್ರಾಣಿಯ ಜೀವಕ್ಕೆ ಕುತ್ತು ತರುವಂತಾಗಿದೆ. ಇಂದು ಬೆಳಗ್ಗೆ ವೀರನಹೊಸಳ್ಳಿ ಬಳಿ ಅರಣ್ಯದಂಚಿನಲ್ಲಿ ಆನೆಯೊಂದು ಬಂದಿದ್ದು, ಅಲ್ಲಿ ಅಳವಡಿಸಲಾದ ಕಂಬಿಯೊಳಗೆ ಅದರ ಕಾಲುಗಳು ಸಿಲುಕಿಕೊಂಡಿದೆ. ಅದರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂದು ಒದ್ದಾಟ ನಡೆಸಿತ್ತಾದರೂ ಅಲ್ಲಿಂದ ತಪ್ಪಿಸಿಕೊಳ್ಳಲಾಗದೇ ಅಲ್ಲಿಯೇ ಪ್ರಾಣ ಬಿಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು ಸಿಲುಕಿಕೊಂಡ ಆನೆಯ ಮೃತದೇಹವನ್ನು ಹೊರಕ್ಕೆ ತೆಗೆಯುವಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News