ಶ್ರೀಲಂಕಾ: ಮತ್ತೆ ಪ್ರಧಾನಿ ಪಟ್ಟಕ್ಕೇರಿದ ರಾನಿಲ್ ವಿಕ್ರಮೆಸಿಂಘೆ

Update: 2018-12-16 07:17 GMT

ಕೊಲಂಬೊ, ಡಿ.16: ಯುನೈಟೆಡ್ ನ್ಯಾಶನಲ್ ಪಾರ್ಟಿಯ ರಾನಿಲ್ ವಿಕ್ರಮೆಸಿಂಘೆ ಮತ್ತೆ ಶ್ರೀಲಂಕಾ ಪ್ರಧಾನಮಂತ್ರಿಯಾಗಿ ರವಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ದ್ವೀಪರಾಷ್ಟ್ರದಲ್ಲಿ ಕಳೆದ 51 ದಿನಗಳಿಂದ ನಡೆಯುತ್ತಿರುವ ರಾಜಕೀಯ ಘರ್ಷಣೆಗೆ ತೆರೆ ಬಿದ್ದಿದೆ.

69 ವರ್ಷದ ವಿಕ್ರಮೆಸಿಂಘೆ ಅವರಿಗೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಇಂದು ಪ್ರಮಾಣ ವಚನ ಬೋಧಿಸಿದರು. ವಿಕ್ರಮೆಸಿಂಘೆ ಅವರನ್ನು ಅ.26ರಂದು ವಿವಾದಾತ್ಮಕ ನಡೆಯೊಂದರಲ್ಲಿ ಪ್ರಧಾನಿ ಹುದ್ದೆಯಿಂದ ಉಚ್ಚಾಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿತ್ತು.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಹಿಂದ ರಾಜಪಕ್ಸ ಪ್ರಧಾನಿ ಹುದ್ದೆಗೆ ಶನಿವಾರ ರಾಜೀನಾಮೆ ನೀಡಿದ್ದರು. ಸೋಮವಾರ ನೂತನ ಸಂಪುಟ ಅಸ್ತಿತ್ವಕ್ಕೆ ಬರಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News