ಹನೂರು ದೇವಸ್ಥಾನದಲ್ಲಿ ವಿಷ ಪ್ರಸಾದ ಪ್ರಕರಣ: ಅರ್ಚಕ ಸೇರಿ ಹಲವು ಮಂದಿ ಸೆರೆ
Update: 2018-12-16 16:34 IST
ಹನೂರು, ಡಿ. 16: ವಿಷಯುಕ್ತ ಪ್ರಸಾದ ಸೇವಿಸಿ 14 ಮಂದಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಅರ್ಚಕ ಚಿನ್ನಪ್ಪಿಗೌಡ, ಮಾದೇಶ ಮತ್ತು ಮಹದೇವರ ಎಂಬವರು ಆರೋಪಿಗಳೆಂದು ಗುರುತಿಸಲಾಗಿದ್ದು, ಚಾಮರಾಜನಗರ ಜಿಲ್ಲಾ ಪೊಲೀಸರು ಬಂಧಿಸಿಸಿದ್ದಾರೆ.
ಬಂಧಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ ಬಳಿಕ ಭಟ್ಟ ವೀರಣ್ಣ, ಲೋಕೇಶ್, ಮಹದೇವಸ್ವಾಮಿ ಮತ್ತು ಪುಟ್ಟಸ್ವಾಮಿ ಎಂಬವರನ್ನು ಬಂಧಿಸಿ ಹನೂರಿನ ಸಮೀಪದ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.