ಮಳವಳ್ಳಿ: ಹಳ್ಳದ ನೀರಿನಲ್ಲಿ ನವಜಾತ ಶಿಶು ಪತ್ತೆ

Update: 2018-12-16 17:54 GMT

ಮಳವಳ್ಳಿ,ಡಿ.16: ಹರಿಯುವ ನೀರಿನ ಕೋಡಿಹಳ್ಳಕ್ಕೆ ಅಪರಿಚಿತರು ನವಜಾತ ಶಿಶುವನ್ನು ಎಸೆದು ಅಮಾನವೀಯತೆ ಮೆರೆದಿರುವ ಘಟನೆ ನಡೆದಿದೆ. 

ಪಟ್ಟಣದ ದೊಡ್ಡಕೆರೆಯ ಕೋಡಿಹಳ್ಳದ ನೀರಿನಲ್ಲಿ ಗಂಡುಶಿಶುವಿನ ಶವ ಪತ್ತೆಯಾಗಿದ್ದು, 2 ದಿನಗಳ ಹಿಂದೆಯಷ್ಟೇ ಹುಟ್ಟಿರಬಹುದೆಂದು ಹೇಳಲಾಗಿದೆ. ಮಗುವಿನ ಹೊಕ್ಕಳ ಬಳ್ಳಿಗೆ ಅಳವಡಿಸಿದ್ದ ಕ್ಲಿಬ್ ಸಹ ಆಗಿಯೇ ಇದ್ದು, ಅದನ್ನು ಗಮನಿಸಿದರೆ ಯಾವುದೋ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಹರಿಯುವ ನೀರಿನಲ್ಲಿ ಎಸೆದು ಹೋಗಿದ್ದಾರೆಂದು ಶಂಕಿಸಲಾಗಿದೆ. 

ಶುಕ್ರವಾರ ಬೆಳಿಗ್ಗೆ ಹಳ್ಳದಲ್ಲಿ ತೇಲಿಕೊಂಡು ಬಂದು ದಡದಲ್ಲಿ ಸಿಲುಕಿಕೊಂಡಿದ್ದ ಶಿಶುವಿನ ಶವವನ್ನು ಬಸವಲಿಂಗಪ್ಪ ಕಾಲೋನಿಯ ಕೆಲ ಯುವಕರು ಹಾಗೂ ಮಹಿಳೆಯರು ಎತ್ತಿಕೊಂಡು ತಂದು ಪಟ್ಟಣದ ಸಾರ್ವಜನಿಕ ಸ್ಮಶಾನದಲ್ಲಿ ಶವಸಂಸ್ಕಾರ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News