ಶ್ರೀನಿವಾಸಪುರ: ಫಲಾಹಿ ಉಮ್ಮತ್ ಫೌಂಡೇಷನ್ ನಿಂದ ವಿದ್ಯಾರ್ಥಿಗಳಿಗೆ ಸಮ್ಮೇಳನ ಕಾರ್ಯಕ್ರಮ

Update: 2018-12-16 18:24 GMT

ಶ್ರೀನಿವಾಸಪುರ,ಡಿ.16: ನಗರದ ರಾಜಧಾನಿ ಗಾರ್ಡನ್ ನಲ್ಲಿ ಫಲಾಹಿ ಉಮ್ಮತ್ ಫೌಂಡೇಷನ್ ನ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸಮ್ಮೇಳನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಮ್ಸ್ ಉನ್ನಿಸಾ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡಬೇಕು. ಮುಂಬರುವ ಎಲ್ಲ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ತೆಗೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಮತ್ತು ತನ್ನ ಊರಿಗೆ ಧನಾತ್ಮಕವಾದ ಹೆಸರನ್ನು ತಂದುಕೊಡಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಫಲಾಹಿ ಉಮ್ಮತ್ ಫೌಂಡೇಶನ್ ಅಧ್ಯಕ್ಷ ಅಬಿದ್ ಅನ್ಸಾರಿ, ಉಪಾಧ್ಯಕ್ಷ ಕೆ ಅಯಾಜ್ ಅಹ್ಮದ್ ಶರೀಫ್, ಕಾರ್ಯದರ್ಶಿ ಅಯಾಜ್ ಪಾಶಾ, ಪದಾಧಿಕಾರಿಗಳು ಹಾಗೂ ಡಾ.ಸೈಯದ್ ಕಾಜಿಮ್, ಸಂಚಾಲಕ ಎಚ್.ಆರ್.ಡಿ ಜಮಾತ್-ಇ-ಇಸ್ಲಾಮಿ ಹಿಂದ್ ಕರ್ನಾಟಕ, ಲೇಯಿಕುಲ್ಲಾ ಖಾನ್ ಮನ್ಸುರಿ ಜಮಾತ್-ಇ-ಇಸ್ಲಾಮಿ ಹಿಂದ್ ಜಿಲ್ಲೆಯ ಸಂಘಟಕ ತುಮಕೂರು, ತಾಲೂಕು ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಮೊಹಮ್ಮದ್ ಸಾದಿಕ್, ಉಪಾಧ್ಯಕ್ಷ ಆರಿಫ್, ಕಾರ್ಯದರ್ಶಿ ಆಖ್ಮಲ್ ಖಾನ್, ಐಐಬಿಬಿ ಕಾಲೇಜು ನಿರ್ದೇಶಕ ಎಂ ಪಾಶಾ ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News