ಹಳಿಯಾಳ: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ಮೃತ್ಯು
Update: 2018-12-17 20:51 IST
ಹಳಿಯಾಳ, ಡಿ. 17: ತಾಲೂಕಿನ ಬೊಮ್ಮನಹಳ್ಳಿ ಬಳಿ ಕಾಳಿನದಿ ದಂಡೆಗೆ ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಸ್ಥಳೀಯರಾದ ಧೂಳು ಗಾವಡೆ (48) ಹಾಗೂ ಮಕ್ಕಳಾದ ಕೃಷ್ಣ ಧೂಳು ಗಾವಡೆ (6), ಗಾಯತ್ರಿ ಧೂಳು ಗಾವಡೆ (9) ಹಾಗೂ ಸತೀಶ್ ಬೀರು ಗಾವಡೆ (7) ಮೃತ ದುರ್ದೈವಿಗಳು. ಇನ್ನು ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆ ರಾಮಿಬಾಯಿ ಎಂಬುವವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಸೋಮವಾರ ಸಂಜೆಯ ವೇಳೆಗೆ ರಾಮಿಬಾಯಿ ಮತ್ತು ಧೂಳು ಗಾವಡೆ ಮೂವರು ಮಕ್ಕಳೊಂದಿಗೆ ಮನೆ ಸಮೀಪದ ಕಾಳಿ ನದಿಯಲ್ಲಿ ಬಟ್ಟೆ ಒಗೆಯಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಮಗಳು ಗಾಯತ್ರಿ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ಹೀಗಾಗಿ ಆಕೆಯನ್ನು ರಕ್ಷಿಸಲು ತಂದೆ ತಾಯಿ ಹಾಗೂ ಮಕ್ಕಳು ಧಾವಿಸಿದ್ದು, ಈ ಸಂದರ್ಭದಲ್ಲಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹಳಿಯಾಳ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.