2018-19ನೇ ಪೂರಕ ಅಂದಾಜುಗಳ ಪಟ್ಟಿಗೆ ವಿಧಾನಸಭೆಯಲ್ಲಿ ಅನುಮೋದನೆ

Update: 2018-12-18 17:38 GMT

ಬೆಳಗಾವಿ, ಡಿ.18: 2018-19 ನೇ ಸಾಲಿನ ಪೂರಕ ಅಂದಾಜುಗಳ ಒಟ್ಟು 6980 ಕೋಟಿ ರೂ. ಮೊದಲನೇ ಕಂತು ಪಟ್ಟಿಗೆ ರಾಜ್ಯ ವಿಧಾನಸಭೆ ಮಂಗಳವಾರ ಅನುಮೋದನೆ ನೀಡಿದೆ.

ಹಣಕಾಸು ಖಾತೆಯನ್ನೂ ಹೊತ್ತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಈ ಪೂರಕ ಅಂದಾಜುಗಳ ಪಟ್ಟಿಯ ವಿವರಣೆಯ ನಂತರ ವಿಧಾನ ಸಭೆಯಲ್ಲಿ ಸಭಾಧ್ಯಕ್ಷ ಕೆ.ಆರ್.ರಮೇಶ್‍ ಕುಮಾರ್ ಅವರು ಮತಕ್ಕೆ ಹಾಕಿದಾಗ 2018-19 ನೇ ಸಾಲಿನ ಮೊದಲ ಕಂತಿನ ಪೂರಕ ಅಂದಾಜುಗಳ ಪಟ್ಟಿಗೆ ವಿಧಾನಸಭೆಯ ಅನುಮೋದನೆ ದೊರೆಯಿತು.

ಈ ಮುನ್ನ, ಮುಖ್ಯಮಂತ್ರಿಯವರು ಅಂದಾಜು ಪಟ್ಟಿಯ ಕುರಿತು ಇಲಾಖಾವಾರು 2019 ಮಾರ್ಚ್ 31 ರವರೆಗೆ ಅಗತ್ಯವಿರುವ ಅನುದಾನದ ವಿವರಣೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರು ಈ ಹಿಂದಿನ ಬಜೆಟ್‍ನಲ್ಲಿ ವೆಚ್ಚ ಮಾಡಲಾದ ವಿವರವನ್ನು ನೀಡುವಂತೆ  ಆಗ್ರಹಿಸಿ ಸಭಾತ್ಯಾಗ ಮಾಡಿದರು.

ನಂತರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ 2018 ನೇ ಸಾಲಿನ ಧನವಿನಿಯೋಗ ಸಂಖ್ಯೆ-3 ವಿಧೇಯಕಕ್ಕೂ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News