ನಾಗಮಂಗಲ: ಕಾಣೆಯಾಗಿದ್ದ ವ್ಯಕ್ತಿಯ ಶವ ಕೆರೆಯಲ್ಲಿ ಪತ್ತೆ

Update: 2018-12-20 17:00 GMT

ನಾಗಮಂಗಲ, ಡಿ.20: ಶನಿವಾರ ಮನೆಯಿಂದ ಕಾಣೆಯಾಗಿದ್ದ ವ್ಯಕ್ತಿಯೋರ್ವನ ಶವ ಪಟ್ಟಣಕ್ಕೆ ಸಮೀಪದ ಸೂಳೆಕೆರೆಯಲ್ಲಿ ಗುರುವಾರ  ಪತ್ತೆಯಾಗಿದೆ.

ಪಟ್ಟಣದ ಕುಂಬಾರ ಬೀದಿ ವಾಸಿ ಎಂ.ಫಯಾಜ್(65) ಶವ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಸೂಳೆಕೆರೆಯಲ್ಲಿ ಗುರುವಾರ ಬೆಳಗ್ಗೆ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪಟ್ಟಣದ ಬ್ಯಾಂಗಲ್ಸ್ ಸ್ಟೋರ್ ವೊಂದರಲ್ಲಿ ಕೆಲಸಗಾರನಾಗಿದ್ದ ಫಯಾಜ್ ಅನಾರೋಗ್ಯ ಪೀಡಿತನಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು ಎನ್ನಲಾಗಿದೆ. ಇವರು ಕಾಣೆಯಾಗಿರುವ ಬಗ್ಗೆ ಪುತ್ರ ಯಾಸಿನ್ ಪಾಷ ಡಿ.19ರಂದು ಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News