ಮಂಡ್ಯ: ಬೈಕ್‍ನಿಂದ ಬಿದ್ದು ಸವಾರ ಮೃತ್ಯು
Update: 2018-12-20 22:41 IST
ಮಂಡ್ಯ, ಡಿ.20: ಬೈಕ್‍ನಿಂದ ಅಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮದ ಬೀಮೇಶ್ವರಿ ಬಳಿ ನಡೆದಿದೆ.
ಮಳವಳ್ಳಿ ತಾಲೂಕಿನ ಹರಿಹರ ಬೂವಳ್ಳಿ ನಿವಾಸಿ ವರದರಾಜು(52) ಸಾವನ್ನಪ್ಪಿದ ವ್ಯಕ್ತಿ. ಕಾಡುಪ್ರಾಣಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದರೆಂದು ಹೇಳಲಾಗಿದೆ.
ಸ್ಥಳಕ್ಕೆ ಹಲಗೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.