ಬೈಕ್-ಲಾರಿ ನಡುವೆ ಅಪಘಾತ: ದಂಪತಿ ಸಾವು
Update: 2018-12-20 23:30 IST
ಹರಿಹರ,ಡಿ.20: ತಾಲೂಕಿನ ಬ್ಯಾಲದಹಳ್ಳಿ ಗ್ರಾಮದ ಬಳಿಯ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಬೈಕ್-ಲಾರಿ ನಡುವೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಗರವಾಸಿ ಮನೋಹರ ಪ್ರಸಾದ್ ಹಾಗೂ ಸುನಿತಾ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದಲ್ಲಿರುವ ಮಗಳ ಜೊತೆ ಮಾತನಾಡಿಸಿಕೊಂಡು ಹರಿಹರಕ್ಕೆ ದಂಪತಿ ಮರಳುತ್ತಿದ್ದಾಗ ಲಾರಿಯೊಂದು ಢಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಮನೋಹರ ಪ್ರಸಾದ್ ದಾವಣಗೆರೆ ಬಿಇಒ ಕಚೇರಿಯಲ್ಲಿ ಎಸ್‍ಡಿಎ ಆಗಿ ಸೇವೆ ಸಲ್ಲಿಸುತ್ತಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸುನಿತಾರನ್ನು ದಾವಣಗೆರೆ ಸಿಜಿ ಆಸ್ಪತ್ರೆಗೆ, ನಂತರ ಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.