ನಾಗಮಂಗಲ: ನಾಲೆಯಲ್ಲಿ ಅಪರಿಚಿತ ಶವ ಪತ್ತೆ

Update: 2018-12-21 18:00 GMT

ನಾಗಮಂಗಲ, ಡಿ.21: ತೋಳಿನ ಬಲಗೈ ಮೇಲೆ  ಶರತ್ ಮತ್ತು ಎಡಗೈ ಮೇಲೆ ಆರ್,ಕೆ. ಭರತ್ ಎಂದು ಹಚ್ಚೆ ಇರುವ ಅಪರಿಚಿತ ವ್ಯಕ್ತಿಯ ಪುರುಷ ಶವವೊಂದು ತಾಲೂಕಿನ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದೆ,

ನಾಗಮಂಗಲ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುವ ಸೂಳೆಕೆರೆಗೆ ಹೇಮಾವತಿ ನಾಲೆಯಲ್ಲಿ ಕಳೆದ ನಾಲ್ಕು ದಿನದಿಂದ ನೀರು ಹರಿಯುತ್ತಿದ್ದು,  ಸುಮಾರು 35 ವರ್ಷ ಪ್ರಾಯದ ಅಪರಿಚಿತ ಪುರಷನ ಶವ ತೇಲಿ ಬಂದಿದೆ.

ನಾಗಮಂಗಲ ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿರುವ ಹೇಮಾವತಿ ನಾಲೆಯಲ್ಲಿ ಶವ ಎತ್ತಲು ದೊಣ್ಣೆಯಿಂದ ಪೊಲೀಸರು ಪ್ರಯತ್ನಿಸಿದ ವೇಳೆ ಶವ ತೇಲಿ ಸೂಳೆಕೆರೆಗೆ ಸೇರಿದೆ. ಕೆರೆಯಿಂದ ಹೊರತೆಗೆದ ಶವವನ್ನು ಪಟ್ಟಣದ ಜನರಲ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ.

ಪಟ್ಟಣ ಠಾಣೆ ಎಎಸ್‍ಐ ಶಾಂತಕುಮಾರ್ ಮತ್ತು ಪುರಸಭೆ ಆರೋಗ್ಯ ಪರಿವೀಕ್ಷಕ ಕೆ.ಎಚ್.ಮೂರ್ತಿ ಮತ್ತು ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News