ಶಿವಮೊಗ್ಗ: ರೈಲ್ವೆ ಹಳಿಯಲ್ಲಿ ಇಬ್ಬರು ಯುವಕರ ಮೃತದೇಹ ಪತ್ತೆ
Update: 2018-12-23 17:38 IST
ಶಿವಮೊಗ್ಗ, ಡಿ. 23: ನಗರದ ಹೊರವಲಯ ಸೋಮಿನಕೊಪ್ಪ ಹಾಗೂ ಕೋಟೆಗಂಗೂರು ನಡುವಿನ ಪಶು ವೈದ್ಯಕೀಯ ಕಾಲೇಜು ಸಮೀಪದ ರೈಲ್ವೆ ಹಳಿಯಲ್ಲಿ ರವಿವಾರ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿವೆ.
ಕೋಟೆಗಂಗೂರು ಗ್ರಾಮದ ಅರುಣ್ (22) ಹಾಗೂ ನಗರದ ಹೊಸಮನೆ ಬಡಾವಣೆಯ ನಿವಾಸಿ ಕಾರ್ತಿಕ್ (20) ಮೃತರು ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪರಿಚಯಸ್ಥರಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.