ಸರ್ಕಾರಕ್ಕೆ ಏನೂ ಆಗಲ್ಲ, ಸುಭದ್ರವಾಗಿದೆ: ಮಡಿಕೇರಿಯಲ್ಲಿ ಸಚಿವೆ ಜಯಮಾಲ
Update: 2018-12-24 17:45 IST
ಮಡಿಕೇರಿ, ಡಿ.24 : ಕಾಂಗ್ರೆಸ್ ಪಕ್ಷಕ್ಕೆ ಯಾರೂ ರಾಜೀನಾಮೆ ನೀಡಲ್ಲ, ಹಿರಿಯರಲ್ಲಿ ಮೂಡಿರುವ ಅಸಮಾಧಾವನ್ನು ವರಿಷ್ಠರು ಸರಿ ಪಡಿಸುತ್ತಾರೆ ಎಂದು ಸಚಿವೆ ಜಯಮಾಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಲ್ಪ ಅಸಮಾಧಾನ ಇರಬಹುದು, ಅದೆಲ್ಲ ಸರಿಯಾಗುತ್ತದೆ, ಸರ್ಕಾರಕ್ಕೆ ಏನೂ ಆಗಲ್ಲ, ಸುಭದ್ರವಾಗಿದೆ ಎಂದು ತಿಳಿಸಿದರು.
ನನಗೆ ಸರ್ಕಾರ ನೀಡಿದ ಜವಬ್ದಾರಿಯನ್ನು ದೇವರ ಕೆಲಸ ಎಂದು ಭಾವಿಸಿ ಮಾಡುತ್ತಿದ್ದೇನೆ. ಜಸ್ಟ್ ಪಾಸ್ ಆಗಿದ್ದೇನೆ ಎನ್ನುವ ಮಾತಿಗೆ ನಾನು ಉತ್ತರ ನೀಡಲ್ಲ. ಕೆಲಸವನ್ನಂತು ಪ್ರಾಮಾಣಿಕತೆಯಿಂದ ಮಾಡುವ ಮೂಲಕ ನ್ಯಾಯ ಒದಗಿಸುತ್ತಿದ್ದೇನೆ ಎಂದು ಜಯಮಾಲ ಸ್ಪಷ್ಟ ಪಡಿಸಿದರು.