ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿದ ಉರಗ ಪ್ರೇಮಿ
Update: 2018-12-24 21:41 IST
ಮೈಸೂರು, ಡಿ.24: ಮನೆಯೊಳಗೆ ನುಗ್ಗಿದ್ದ ಹಾವನ್ನು ಹಿಡಿಯಲುಹೋದ ಉರಗ ಪ್ರೇಮಿಯೊಬ್ಬರು ಅದೇ ಹಾವಿನಿಂದ ಕಚ್ಚಿಸಿಕೊಂಡು ಸಾವಿಗೀಡಾಗಿದ್ದಾರೆ.
ನಂಜನಗೂಡು ತಾಲೂಕಿನಲ್ಲಿ ಘಟನೆ ನಡೆದಿದೆ. ನೇರಳೆ ಗ್ರಾಮದ ಉರಗ ಪ್ರೇಮಿ ಕೃಷ್ಣ (38) ಸಾವಿಗೀಡಾದವರು.
ಗ್ರಾಮದ ರಾಮಶೆಟ್ಟಿ ಎಂಬುವರ ಮನೆಯಲ್ಲಿ ರಾತ್ರಿ ನಾಗರಹಾವೊಂದು ಕಾಣಿಸಿಕೊಂಡಿದ್ದು ತಕ್ಷಣ ಕೃಷ್ಣ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೃಷ್ಣ, ಹಾವನ್ನು ಹಿಡಿದು ಡಬ್ಬಿಯಲ್ಲಿ ಹಾಕಿ ಸುರಕ್ಷಿತ ಸ್ಥಳಕ್ಕೆ ಬಿಡಲು ಹೋದಾಗ, ಹಾವು ಕೈಗೆ ಕಚ್ಚಿದೆ. ತಕ್ಷಣ ಹಾವನ್ನು ಹೊಡೆದು ಸಾಯಿಸಿದ ಕೃಷ್ಣ ಅಸ್ವಸ್ಥಗೊಂಡಿದ್ದಾರೆ.
ಹಾವು ಕಚ್ಚಿದ್ದನ್ನು ತಿಳಿದು ಗ್ರಾಮಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.