ಬಿಜೆಪಿ ಯಾವುದೇ ಕಾರಣಕ್ಕೂ ಸರಕಾರವನ್ನು ಬೀಳಿಸುವ ಪ್ರಯತ್ನ ಮಾಡಲ್ಲ: ಶಾಸಕ ರವೀಂದ್ರನಾಥ್
Update: 2018-12-25 22:48 IST
ದಾವಣಗೆರೆ,ಡಿ.25: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ತನ್ನಿಂತಾನೇ ಬಿದ್ದರೆ, ಸರ್ಕಾರ ರಚಿಸುವ ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.
ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲ್ಲ. ಆದರೆ, ಸರ್ಕಾರ ತನ್ನಿಂತಾನೇ ಬಿದ್ದರೆ, ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ರಚಿಸುತ್ತೇವೆ ಎಂದರು.
ಕಾಂಗ್ರೆಸ್-ಜೆಡಿಎಸ್‍ನಲ್ಲಿರುವಂತೆ ನಮ್ಮಲ್ಲೂ ಅತ್ತಕಡೆ ಹೋಗುವವರಿರಬಹುದು. ಹೀಗಾಗಿ ನಮ್ಮ ಶಾಸಕರ ಮೇಲೂ ನಿಗಾ ಇಡಬೇಕಾಗಿದೆ. ನಾನಂತೂ ಯಾವುದೇ ಪಕ್ಷಕ್ಕೆ ಹೋಗಲ್ಲ. ನನ್ನನ್ನು ಯಾರೂ ಮಾತಾಡಿಸಿಲ್ಲ ಎಂದರು.
ರಾಜ್ಯದಲ್ಲಿ ಸಮೃದ್ಧ ಮಳೆ, ಬೆಳೆ ಆಗಲಿ ಎಂದು ಶ್ರೀಮಹೇಶ್ವರ ಸ್ವಾಮಿಯಲ್ಲಿ ಬೇಡಿಕೊಂಡಿದ್ದೇನೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.