ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ: ಶಾಸಕ ಬಿ.ಸಿ.ಪಾಟೀಲ್

Update: 2018-12-25 17:35 GMT

ಮೈಸೂರು,ಡಿ.25: ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ. ಎಡ, ಬಲ, ಬೋವಿ ಸಮುದಾಯಗಳಲ್ಲಿನ ಪ್ರಾತಿನಿದ್ಯ ಸರಿಪಡಿಸಿದ್ದಾರೆ. ಆದರೆ ಸಾಧು ಲಿಂಗಾಯತರಿಗೆ ಸ್ಥಾನ ಕೊಡದೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ್ ಆರೋಪಿಸಿದರು.

ನಗರದ ಸುತ್ತೂರು ಮಠಕ್ಕೆ ಮಂಗಳವಾರ ಭೇಟಿ ನೀಡಿ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಉಭಯಕುಶಲೋಪರಿ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರನ್ನು ನಂಬಿದ್ದು ನಿಜ. ಸಿದ್ದರಾಮಯ್ಯನವರು ನಮ್ಮನ್ನು ಕೈ ಹಿಡಿದಿಲ್ಲ. ಸಮಿಶ್ರ ಸರಕಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಅತೃಪ್ತ ಶಾಸಕರ ಜೊತೆ ಚರ್ಚೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅರು ಮಂದಿ ಮುಸ್ಲಿಂ ಶಾಸಕರಲ್ಲಿ 3 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. 16 ಮಂದಿ ಲಿಂಗಾಯತರು ಗೆದ್ದಿದ್ದರೂ ಕೇವಲ 3 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಯಡಿಯೂರಪ್ಪನವರ ಫೋನ್ ಕಾಲ್ ರೆಕಾರ್ಡ್ ಮಾಡಿ ಬಹಿರಂಗಪಡಿಸಿದ್ದೆ. ನಮಗೆ ಅದಕ್ಕಾಗಿ ಅವಾರ್ಡ್ ಕೊಡಬೇಕಿತ್ತು, ಪನಿಶ್ಮೆಂಟ್ ಕೊಟ್ಟಿದ್ದಾರೆ. ರಾಮಲಿಂಗಾ ರೆಡ್ಡಿ ಅಂಥವರನ್ನೂ ಕೈ ಬಿಟ್ಟಿದ್ದು ಅಸಮಾಧಾನ ತಂದಿದೆ ಎಂದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News