ಉ.ಪ್ರದೇಶ: 800 ಬೀಡಾಡಿ ದನಗಳನ್ನು ಶಾಲೆ, ಆರೋಗ್ಯ ಕೇಂದ್ರದೊಳಗೆ ಕಟ್ಟಿದ ರೈತರು

Update: 2018-12-26 10:47 GMT

ಆಲಿಘರ್, ಡಿ.26: ತಮ್ಮ ಬೆಳೆಗಳನ್ನು ಬೀಡಾಡಿ ದನಗಳು ನಾಶಪಡಿಸುತ್ತಿರುವುದರಿಂದ ಕೋಪಗೊಂಡ ರೈತರು ದನಗಳನ್ನು ಸರಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳೊಳಗೆ ಕಟ್ಟಿ ಹಾಕಿರುವ ಘಟನೆ ಉತ್ತರ ಪ್ರದೇಶದ ಆಲಿಘರ್ ನಲ್ಲಿ ನಡೆದಿದೆ.

ದನಗಳು ಕೃಷಿ ಪ್ರದೇಶಗಳಿಗೆ ನುಗ್ಗದಂತೆ ತಡೆಯಲು ಗೊರಾಯ್ ಮತ್ತು ತಮೌತಿಯಾ ಗ್ರಾಮಗಳಲ್ಲಿ ರೈತರು ತೀವ್ರ ಚಳಿಯಲ್ಲೂ ಇಡೀ ರಾತ್ರಿಯನ್ನು ಕೃಷಿ ಪ್ರದೇಶಗಳಲ್ಲೇ ಕಳೆಯುತ್ತಿದ್ದಾರೆ.

“ಈ ದನಗಳು ನಮ್ಮ ಬೆಳೆಗಳನ್ನು ನಾಶಪಡಿಸುತ್ತಿವೆ. ಸ್ಥಳೀಯ ಆಡಳಿತವಾಗಲೀ, ರಾಜ್ಯ ಸರಕಾರವಾಗಲೀ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ರೈತ ಮಥುರಾ ಪ್ರಸಾದ್ ಶರ್ಮಾ ಹೇಳುತ್ತಾರೆ.

“ನಮ್ಮಲ್ಲಿ ಹೆಚ್ಚಿನವರು ಬೆಳೆಗಳನ್ನು ರಕ್ಷಿಸುವ ಸಲುವಾಗಿ ರಾತ್ರಿ ಪೂರ್ತಿ ಎಚ್ಚರದಲ್ಲೇ ಇರಬೇಕಾಗಿದೆ. ಇದರಿಂದಾಗಿ ನಾವು ಅನಾರೋಗ್ಯಕ್ಕೊಳಗಾಗಿದ್ದೇವೆ. ಆದ್ದರಿಂದ ನಾವು ಬೀಡಾಡಿ ದನಗಳನ್ನು ಶಾಲೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಕಟ್ಟಿ ಹಾಕಿದ್ದೇವೆ” ಎಂದು ಗ್ರಾಮಸ್ಥ ಶ್ಯಾಮ್ ಬಿಹಾರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News