ಮೈಸೂರು: ಮಹಿಳೆ ಅನುಮಾನಾಸ್ಪದ ಸಾವು
Update: 2018-12-26 21:54 IST
ಮೈಸೂರು,ಡಿ.26: ಮಹಿಳೆಯೋರ್ವರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ಕುಂಬಾರಕೊಪ್ಪಲಿನಲ್ಲಿ ನಡೆದಿದೆ.
ಮೃತರನ್ನು ಕುಂಬಾರಕೊಪ್ಪಲಿನ ನಿವಾಸಿ ಅಮ್ರೀನ್ ಖಾನಂ ಎಂದು ಗುರುತಿಸಲಾಗಿದೆ.
ಗೌಸಿಯಾನಗರದ ನಿವಾಸಿಯಾಗಿರುವ ಅಮ್ರೀನ್ ಖಾನಂ ಹೆಚ್.ಡಿ.ಕೋಟೆಯ ಮಹೇಂದ್ರ ಅಲಿಯಾಸ್ ಸಫ್ರಝ್ ಖಾನ್ ರನ್ನು ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಇಬ್ಬರೂ ಕುಂಬಾರಕೊಪ್ಪಲಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಸೋಮವಾರ ರಾತ್ರಿ ಅಮ್ರೀನ್ ಖಾನಂ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ, ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಆದರೆ ಅವರ ಸಾವಿನ ಕುರಿತು ಅನುಮಾನವಿದೆ ಎಂದು ಮೃತರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.