ಮೈಸೂರು: ರಸ್ತೆಗೆ ಭತ್ತ ಸುರಿದು ರೈತರಿಂದ ಪ್ರತಿಭಟನೆ

Update: 2018-12-26 16:33 GMT

ಮೈಸೂರು,ಡಿ.26: ಭತ್ತ ಖರೀದಿಗೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ರಸ್ತೆಗೆ ಭತ್ತ ಸುರಿದು ರೈತರು ಪ್ರತಿಭಟನೆ ನಡೆಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ಅತ್ತಳ್ಳಿ ದೇವರಾಜು ನೇತೃತ್ವದಲ್ಲಿ ಸುಮಾರು 50 ರಿಂದ 70 ರೈತರು ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಗನ್ ಹೌಸ್ ಕಚೇರಿಯಿಂದ ಭತ್ತದ ಚೀಲ ತೆಗೆದುಕೊಂಡು ಹೋಗಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ರಸ್ತೆಗೆ ಭತ್ತವನ್ನು ಸುರಿದು ಪ್ರತಿಭಟನೆ ನಡೆಸಿದರು.

ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರಕಾರ ಕೇವಲ ಭತ್ತ ಖರೀದಿಗೆ ನೋಂದಣಿ ಮಾಡಿಸಿಕೊಂಡಿದೆ. ಆದರೆ ಈವರೆಗೂ ಭತ್ತ ಖರೀದಿ ಮಾಡುವ ಕೆಲಸ ಮಾಡಿಲ್ಲ. ಭತ್ತದ ಬೆಲೆ ದಿನೇ ದಿನೇ ಕುಸಿಯುತ್ತಿದೆ. ಈ ಕೂಡಲೇ ರಾಜ್ಯ ಸರ್ಕಾರ ರೈತರು ಬೆಳೆದ ಭತ್ತ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರಲ್ಲದೇ, ರೈತರ ಪಾಲಿಗೆ ರಾಜ್ಯ ಸರ್ಕಾರ ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News