ಮಂಡ್ಯ: ಟ್ರಾನ್ಸ್ ಜೆಂಡರ್ ಮಸೂದೆ ವಿರುದ್ಧ ಮಂಗಳಮುಖಿಯರ ಪ್ರತಿಭಟನೆ

Update: 2018-12-26 17:31 GMT

ಮಂಡ್ಯ, ಡಿ.26: ಲೋಕಸಭೆಯಲ್ಲಿ ಮಂಡಿಸಿರುವ ಟ್ರಾನ್ಸ್ ಜೆಂಡರ್ ಪರ್ಸನ್ಸ್(ಹಕ್ಕುಗಳ ಉಲ್ಲಂಘನೆ) ಮಸೂದೆಯಲ್ಲಿ ಹಲವು ನೂನ್ಯತೆಗಳಿದ್ದು, ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಮಂಗಳಮುಖಿಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮಸೂದೆಯು ಲೋಕಸಭೆಯಲ್ಲಿ ಅಂಗೀಕೃತವಾಗಿದ್ದು, ಇದೀಗ ರಾಜ್ಯಸಭೆಗೆ ಬಂದಿದೆ. ಈ ನಡುವೆ 2016ರ ರಾಜ್ಯಸಭೆಯು ಡಿಎಂಕೆ ಸದಸ್ಯ ತಿರುಚಿ ಶಿವರಿಂದ ರಚಿಸಿಲ್ಟಪ್ಪ ಅದ್ಭುತ ಖಾಸಗಿ ಮಸೂದೆಯನ್ನು ಜಾರಿಗೊಳಿಸಿತು. ಅದು ಸಮುದಾಯದೊಂದಿಗೆ ಸಮಾಲೋಚಿಸಿದೆ ಎಂದು ಅವರು ಹೇಳಿದರು.

ತಿರುಚಿ ಶಿವ ಅವರ ಮಸೂದೆಯು ಮೀಸಲಾತಿ ಹಕ್ಕುಗಳು, ಉದ್ಯೋಗ ಮತ್ತು ಶಿಕ್ಷಣ ಅವಕಾಶಗಳು, ಸ್ವಯಂ ನಿರ್ಣಯ, ವಿಶೇಷ ನ್ಯಾಯಾಲಯಗಳು, ಟ್ರಾನ್ಸ್ ಜೆಂಡರ್ ರೈಟ್ಸ್ ಕಮಿಷನ್ ಮತ್ತು ಇನ್ನಿತರೆ ಹಲವಾರು ಪ್ರಗತಿಪರ ಸ್ಥಾನಗಳನ್ನು ಹೊಂದಿದ್ದರೂ, ಇಂದು ಅಂಗೀಕೃತವಾದ ಭಾರತ ಸರಕಾರದ ಮಸೂದೆಯು ಸಂರಕ್ಷಣೆಗಿಂತಲೂ ಹೆಚ್ಚು ಹಕ್ಕುಗಳನ್ನು ಉಲ್ಲಂಘಿಸಿರುವುದರಿಂದ ಟ್ರಾನ್ಸ್ ಜೆಂಡರ್ ಪರ್ಸನ್ಸ್ ಮಸೂದೆಯನ್ನು ಸೂಕ್ತವಾಗಿ ಮರುನಾಮಕರಣ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸದರಿ ಮಸೂದೆ ಸಂಘಟಿತ ಭಿಕ್ಷಾಟನೆ ಅಪರಾಧೀಕರಣವೆಂದು ಹೇಳುತ್ತದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ರಕ್ಷಣೆ ಇತ್ಯಾದಿ ಯಾವುದೇ ಅವಕಾಶಗಳನ್ನು ನಿರಾಕರಿಸುತ್ತದೆ. ಸಿಸ್ಜೆಂಡರ್ ಜನರಿಗೆ ಹೋಲಿಸಿದರೆ ಇದು ತಾರತಮ್ಯ ಮತ್ತು ಹಾನಿಯ ಹಗುರ ಪರಿಣಾಮ ಬೀರುತ್ತದೆ. ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ನಾವು ನಮ್ಮ ಪೋಷಕರ ಜತೆ ಇರಬೇಕಾಗುತ್ತದೆ ಎಂದು ಅವರು ಆರೋಪಿಸಿದರು.

ಈ ಮಸೂದೆ ಸಂಘಟಿತ ಭಿಕ್ಷಾಟನೆಗೆ 10 ವರ್ಷ ಶಿಕ್ಷೆ ವಿಧಿಸುತ್ತದೆ. ಹಾರ್ಮೋನುಗಳು ಮತ್ತು ಇತರೆ ಔಷಧಿಗಳ ಆಡಳಿತವನ್ನು ಅಪರಾಧೀಕರಿಸುತ್ತದೆ. ಲಿಂಗ ದೃಢೀಕರಣ ಹಾರ್ಮೋನ್ ಚಿಕಿತ್ಸೆಯನ್ನು ಪ್ರವೇಶಿಸುವ ದಬ್ಬಾಳಿಕೆ ಮತ್ತು ಸಹಾಯಧನ ನಡುವೆ ವ್ಯತ್ಯಾಸ ಇಲ್ಲ. ಇದು ಸ್ವಯಂಪ್ರೇರಿತ ಲೈಂಗಿಕ ಕೆಲಸದ ನಡುವಿನ ವ್ಯತ್ಯಾಸವನ್ನು ಗುರುತಿಸುವುದಿಲ್ಲ ಮತ್ತು ಕಳ್ಳಸಾಗಾಣಿಕೆಗೆ ಭಿನ್ನವಾಗಿದೆ. ಲೈಂಗಿಕ ಕಾರ್ಯದ ಜನರ ಸಂಸ್ಥೆಯ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.

ಆಶೋದಯ ಸಮಿತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News