ರೈಲು ಹರಿದು ಇಬ್ಬರು ನೌಕರರು ಮೃತ್ಯು
Update: 2018-12-27 19:03 IST
ಕೋಲಾರ,ಡಿ.27: ಕರ್ತವ್ಯ ನಿರತರಾಗಿದ್ದ ವೇಳೆಯಲ್ಲಿ ರೈಲು ಢಿಕ್ಕಿ ಹೊಡೆದು ಇಬ್ಬರು ರೈಲ್ವೆ ಮಂಡಳಿಯ ನೌಕರರು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ವರದಾಪುರ ರೈಲ್ವೆ ಟ್ರ್ಯಾಕ್ ಬಳಿ ಸಂಭವಿಸಿದೆ.
ಮೃತರನ್ನು ರಾಜಸ್ಥಾನ ಮೂಲದ ಹರೀಶ್ ಸಿಂಗ್ ಮೀನಾ (30) ಹಾಗೂ ಆಂದ್ರಪ್ರದೇಶದ ಕುಪ್ಪಂನ ಬಂಡಪಲ್ಲಿ ಗ್ರಾಮದ ರಾಮಸ್ವಾಮಿ ಎಂದು ಗುರುತಿಸಲಾಗಿದೆ.
ರೈಲ್ವೆ ಟ್ರ್ಯಾಕ್ ತಪಾಸಣೆ ಮಾಡುವಾಗ ರೈಲು ಹರಿದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಂಗಾರಪೇಟೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.