ನಾಗಮಂಗಲ: ನೀರಿಗಾಗಿ ಬಿಂಡಿಗನವಿಲೆ ಹೋಬಳಿ ಗ್ರಾಮಸ್ಥರ ಪ್ರತಿಭಟನೆ

Update: 2018-12-27 17:29 GMT

ನಾಗಮಂಗಲ, ಡಿ.27: ಕೆರೆಗಳಿಗೆ ನೀರು ತುಂಬಿಸಲು ಹಾಗೂ ಕುಡಿಯುವ ನೀರು ಪೂರೈಸಲು ಒತ್ತಾಯಿಸಿ ಹೋಬಳಿಯ ವಿವಿಧ ಗ್ರಾಮಸ್ಥರು ಗುರುವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಂಜುಂಡಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಿಂಡಿಗನವಿಲೆಯಿಂದ ಪಟ್ಟಣದವರಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ಗ್ರಾಮಸ್ಥರು, ಹೋಬಳಿ ಕೆರೆಕಟ್ಟೆಗಳಿಗೆ 13 ವರ್ಷಗಳಿಂದ ನೀರು ತುಂಬಿಸಿಲ್ಲದ ಕಾರಣ ಜನಜಾನುವಾರುಗಳಿಗೆ ತೊಂದರೆಯಾಗಿದೆ ಎಂದು ಕಿಡಿಕಾರಿದರು.

ಶಾಸಕರು ಹೇಮಾವತಿ ನದಿಯಿಂದ ಉಳಿದ ಹೋಬಳಿ ಕೆರೆಗಳಿಗೆ ನೀರು ತುಂಬಿಸಿ ಬಿಂಡಿಗನವಿಲೆ ಹೋಬಳಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ ಅವರು, ಈಗಲಾದರೂ ಶಾಸಕರು, ಅಧಿಕಾರಿಗಳು ನೀರು ತುಂಬಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾಹಿತಿ ನಾರಾಯಣಸ್ವಾಮಿ ಮಾತನಾಡಿ, 2005ರಲ್ಲಿ ಮಳೆಯಿಂದ ಕೆರೆಗಳು ತುಂಬಿದ್ದವು. ಅಲ್ಲಿಂದ ಇಲ್ಲಿವರೆಗೆ ನೀರು ತುಂಬಿಸಿಲ್ಲ. ನೀರು ಕೇಳುವುದು ನಮ್ಮ ಹಕ್ಕು. ಇದರಲ್ಲಿ ರಾಜಕೀಯ ಇಲ್ಲವೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News