ಮಂಡ್ಯ: ಮೇಕೆದಾಟು, ಮಹಾದಾಯಿ ಯೋಜನೆಗೆ ವಿರೋಧ ಖಂಡಿಸಿ ಪ್ರತಿಭಟನೆ

Update: 2018-12-27 17:31 GMT

ಮಂಡ್ಯ, ಡಿ.27: ಮೇಕೆದಾಟು ಹಾಗೂ ಮಹಾದಾಯಿ ಯೋಜನೆಗೆ ತಡೆಯೊಡ್ಡುತ್ತಿರವ ತಮಿಳುನಾಡು, ಗೋವಾ ಸರಕಾರಗಳ ವಿರುದ್ಧ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ  ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮೇಕೆ ದಾಟು ಮಹಾದಾಯಿ ಯೋಜನೆ ಸಂಬಂಧ ತಮಿಳುನಾಡು, ಗೋವಾರ ಸರಕಾರ ಕ್ಯಾತೆ ತೆಗೆಯುತ್ತಲೇ ಇವೆ. ಕೂಡಲೇ ಇದಕ್ಕೆ ಅಂತ್ಯವಾಡಿ ಯೋಜನೆ ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮೇಕೆದಾಟು ಹಾಗೂ ಮಹಾದಾಯಿ ಯೋಜನೆ ಸಮರ್ಪಕಗಿ ಜಾರಿಯಾದರೆ ರಾಜ್ಯದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಜತೆಗೆ ಕಾವೇರಿಯಿಂದ ತಮಿಳುನಾಡಿಗೆ ವ್ಯರ್ಥವಾಗಿ ಹೋಗುತ್ತಿರುವ ನೀರನ್ನು ಸಂಗ್ರಹಿಸಿ ಅವರಿಗೇ ಹೆಚ್ಚು ನೀರು ನೀಡಬಹುದು ಎಂದು ಅವರು ಹೇಳಿದರು.

ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ, ರವೀಂದ್ರ, ಬೋರೇ ಗೌಡ, ಉಮೇಶ್, ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News