×
Ad

ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ

Update: 2018-12-28 21:28 IST

ಬೀದರ್, ಡಿ.28: ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ನೀಡುವ ಜಾನಪದ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದವರಿಗೆ ನೀಡುವ ಪ್ರಸಕ್ತ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ನಗರದಲ್ಲಿಂದು ಆಯೋಜಿಸಿದ್ದ ಜಾನಪದ ಸಂಭ್ರಮ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ವಿಜೇತರು: ಬೆಂಗಳೂರು ನಗರ ಜಿಲ್ಲೆಯ ಯಲ್ಲಮ್ಮ(ಸಂಪ್ರದಾಯ ಪದ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುನಿನರಸಮ್ಮ(ಸೋಬಾನೆ ಪದ), ರಾಮನಗರ ಮುನಿ ಚೂಡಯ್ಯ(ತಮಟೆ ವಾದನ), ಕೋಲಾರ ಬ್ಯಾಟಮ್ಮ(ಸೂಲಗಿತ್ತಿ ಜಾನಪದ ವೈದ್ಯೆ), ಚಿಕ್ಕಬಳ್ಳಾಪುರ ನರಸಿಂಹಯ್ಯ(ಚೆಕ್ಕೆ ಭಜನೆ), ತುಮಕೂರು ಲಕ್ಷಮ್ಮ(ಜುಂಜಪ್ಪನ ಕಾವ್ಯ), ದಾವಣಗೆರೆ ಪುಟ್ಟಮಲ್ಲಪ್ಪ(ನಾಟಿ ವೈದ್ಯ), ಚಿತ್ರದುರ್ಗ ಎಸ್. ರೇವಣ ಸಿದ್ದಪ್ಪ(ಭಜನೆ ಪದ), ಶಿವಮೊಗ್ಗ ಕರಡಿ ಲಕ್ಷ್ಮಣಪ್ಪ(ಡೊಳ್ಳು ಕುಣಿತ)ಗೆ ನೀಡಲಾಗಿದೆ.

ಹಾಸನದ ಚಂದ್ರಬಾಯಿ(ಲಂಬಾಣಿ ಹಾಡುಗಳು), ಚಿಕ್ಕಮಗಳೂರಿನ ಜಿ.ವಿ.ಕೊಟ್ರೇಶಪ್ಪ(ವೀರಗಾಸೆ), ಮೈಸೂರಿನ ನಾಗರಾಜು(ನಗಾರಿ ವಾಹನ), ಮಂಡ್ಯದ ಸಿದ್ದಯ್ಯ(ಕೋಲಾಟ), ದಕ್ಷಿಣ ಕನ್ನಡದ ಯಮುನ(ಭೂತಾರಾದನೆ), ಉಡುಪಿ ಅಮ್ಮಣ್ಣಿ(ಪಾಡ್ದಾನೆ), ಕೊಡಗಿನ ಜಾನಕಿ ತಮ್ಮಯ್ಯ(ದುಡಿಪಾಟ್), ಕಲಬುರಗಿ ಮಹಾದೇವ ಶಾಂತಪ್ಪ(ಸಂಪ್ರದಾಯ ಪದ), ವಿಜಯಪುರ ಚಿನ್ನಪ್ಪಗಿರಿಮಲ್ಲಪ್ಪಪೂಜಾರಿ(ಸಂಚಾಳ ವಾದನ), ಹಾವೇರಿ ಬಡವಪ್ಪ ಮಹಾದೇವಪ್ಪಆನವಟ್ಟಿ(ಡೊಳ್ಳಿನ ಪದ) ಸೇರಿದಂತೆ ಎಲ್ಲ ಜಿಲ್ಲೆಗಳಿಗೆ ತಲಾ ಒಬ್ಬೊಬ್ಬರಿಗೆ ಪ್ರಶಸ್ತಿ ನೀಡಲಾಯಿತು.

ಇದೇ ವೇಳೆ ಜಾನಪದ ತಜ್ಞ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯ ಡಾ.ಮಲ್ಲಿಕಾರ್ಜುನ್ ಕಲಮರಳಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು, ಸದಸ್ಯ ವಿಜಯ್ ಕುಮಾರ್ ಸೋನಾರೆ, ರಿಜಿಸ್ಟ್ರಾರ್ ಸಿದ್ರಾಮ್ ಶಿಂಧೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News