×
Ad

ತ್ವರಿತವಾಗಿ ಚಿಕಿತ್ಸೆ ಪಡೆದಿದ್ದರೆ ರೋಗ ನಿಯಂತ್ರಣ ಮಾಡಬಹುದಿತ್ತು: ಸಚಿವ ಶಿವಾನಂದ ಪಾಟೀಲ್

Update: 2018-12-29 23:07 IST

ವಿಜಯಪುರ,ಡಿ.29: ಎಚ್1ಎನ್1 ರೋಗಕ್ಕೆ ಬಲಿಯಾದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ, ಬಹುಶ: ಅವರಿಗಿರುವ ರೋಗವನ್ನು ಮುಚ್ಚಿಟ್ಟಿರಬಹುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. 

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ತ್ವರಿತವಾಗಿ ಚಿಕಿತ್ಸೆ ತೆಗೆದುಕೊಂಡಿದ್ದರೆ ಅವರು ಈ ರೋಗವನ್ನು ನಿಯಂತ್ರಣ ಮಾಡಬಹುದಿತ್ತು. ಈ ರೋಗ ಬಂದಾಗ ರೋಗಿಗಳು ತೀವ್ರ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಆದರೆ ಆ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿ ಮುಂಜಾಗ್ರತೆ ವಹಿಸಿಲಿಲ್ಲ ಎಂದು ಹೇಳಿದರು.

ಹೆಚ್1ಎನ್1 ದೇಶದಲ್ಲಿ ಬಹಳ ಕ್ರಿಯಾಶೀಲವಾಗಿತ್ತು. ನಮ್ಮ ರಾಜ್ಯದಲ್ಲಿ ಇದನ್ನು ನಿಯಂತ್ರಣ ಮಾಡಲು ಎಲ್ಲ ಕ್ರಮ ಕೈಗೊಂಡಿದ್ದೇವೆ. ಆದರೂ ಜೀವಹಾನಿಯಾಗಿವೆ ಎಂದ ಸಚಿವರು, ಬೇರೆ ರಾಜ್ಯಕ್ಕಿಂತ ನಮ್ಮಲ್ಲಿ ಹಾನಿ ಕಡಿಮೆ ಎಂದ ಅವರು, ಪ್ರತಿ ವರ್ಷ ಹೋಗುವಂತೆ ಈ ಬಾರಿ ಕೂಡಾ ಸಿಎಂ ವಿದೇಶಕ್ಕೆ ಹೋಗುತ್ತಾರೆ. ಅದರಲ್ಲೇನಿದೆ, ಅದು ಅವರ ವೈಯಕ್ತಿಕ ವಿಚಾರ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News