ಹನೂರು: ವಿಶ್ವ ಅಂಗವಿಕಲರ ದಿನಾಚರಣೆ
ಹನೂರು,ಡಿ.29: ವಿಕಲಚೇತನರಿಗೆ ಸಹಾನುಭೂತಿಯನ್ನು ತೋರಿಸದೆ ಅವರಲ್ಲಿನ ಕೌಶಲ್ಯ ಪ್ರತಿಭೆ ಪ್ರದರ್ಶಸಿಲು ಅವಕಾಶಗಳನ್ನು ಕಲ್ಪಿಸುವಂತೆ ಮಾಡಿ ಎಂದು ತಾಪಂ ಅಧ್ಯಕ್ಷ ರಾಜೇಂದ್ರ ತಿಳಿಸಿದರು.
ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಹನೂರು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿ ಹಾಗೂ ಸರ್ವಶಿಕ್ಷಣ ಅಭಿಮಾನ ಚಾಮರಾಜನಗರ ಇವರ ಸಂಯುಕ್ತ ಆಶ್ರಯದಲ್ಲಿ ಹನೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿದ ಬಿಆರ್‍ಪಿ ದಿನೇಶ್, ಹನೂರು ಶೈಕ್ಷಣಿಕ ವಲಯದಲ್ಲಿ ಸುಮಾರು 325 ವಿಕಲಚೇತನ ಮಕ್ಕಳ ವಿದ್ಯಾಬ್ಯಾಸ ಮಾಡುತ್ತಿದ್ದು, ಈ ಮಕ್ಕಳ ಶಿಕ್ಷಣವನ್ನು ಗುಣಮಟ್ಟದಿಂದ ನೀಡುವ ದಿಸೆಯಲ್ಲಿ 22 ಮಕ್ಕಳಿಗೆ ವಾರಕ್ಕೆ 2 ದಿನ ಪಿಜಿಯೋಥೆರೆಪಿ ಕೇಂದ್ರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ 25 ಮಕ್ಕಳ ಗೃಹಬ್ಯಾಸದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಈ ವರ್ಷದಲ್ಲಿ ಶಿಕ್ಷಣ ಇಲಾಖೆ ವತಿಯಿಂದ 1ರಿಂದ 8 ನೇ ತರಗತಿಯ ಮಕ್ಕಳಿಗೆ ಆಯೋಜಿಸಿದ್ದ ವೈದ್ಯಕೀಯ ತಪಾಸಣೆಯಲ್ಲಿ 297 ಮಕ್ಕಳು ಹಾಜರಾಗಿದ್ದರು. ಇದರಲ್ಲಿ 105 ಮಕ್ಕಳಿಗೆ ವೀಲ್ ಚೇರ್ ಸೇರಿದಂತೆ ಹಲವು ವೈದ್ಯಕೀಯ ಸಂಬಂಧಿ ಸಾಧನ ಸಲಕರಣೆಗಳನ್ನು ಈಗಾಗಲೇ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಮಮತಾ, ರಾಜ್ಯ ವಿಕಲಚೇತನ ಮಕ್ಕಳ ಒಕ್ಕೂಟದ ಉಪಾಧ್ಯಕ್ಷ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಜಾನ್‍ಬ್ರೀಟೋ, ಬಿಇಒ ಟಿಆರ್ ಸ್ವಾಮಿ ದೈಹಿಕ ಶಿಕ್ಷಕ ಪರಿವೀಕ್ಷಕ ತೇಜ್‍ಪಾಲ್, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.