×
Ad

ಮೈಸೂರು: ರೌಡಿ ಶೀಟರ್ ಗಳ ಮನೆ ಮೇಲೆ ಪೊಲೀಸರ ದಾಳಿ

Update: 2018-12-29 23:50 IST

ಮೈಸೂರು,ಡಿ.29: ಬೆಳ್ಳಂಬೆಳ್ಳಿಗೆ ರೌಡಿ ಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಗರದಾದ್ಯಂತ ಪೊಲೀಸರು ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.

ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ರೌಡಿಶೀಟರ್ ಗಳ ಚಲನವಲನದ ಮೇಲೆಯೂ ಕಣ್ಣಿರಿಸಿರುವ ಪೊಲೀಸರು ಪಡುವಾರಹಳ್ಳಿಯಲ್ಲಿಯೂ ದಾಳಿ ನಡೆಸಿದ್ದಾರೆ. ಪಡುವಾರಹಳ್ಳಿಯ ಕರಿಯಪ್ಪನ ಕೊಲೆ ಪ್ರಕರಣದಲ್ಲಿ ಗುರುತಿಸಿಕೊಮಡಿರುವ ಮಂಜೇಶ್, ಹೇಮಂತ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಉಳಿದ ಆರೋಪಿಗಳ ಚಲನವನದ ಮೇಲೆಯೂ ಕಣ್ಣಿರಿಸಿದ್ದಾರೆ. ಪಡುವಾರಹಳ್ಳಿಯಲ್ಲಿ ಜಯಲಕ್ಷ್ಮಿಪುರಂ ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ. 

ಇದೇ ರೀತಿ ವಿವಿಧ ಠಾಣೆಗಳ ಇನ್ಸ್ಪೆಕ್ಟರ್ ಗಳು ತಮ್ಮ ವ್ಯಾಪ್ತಿಗೆ ಬರುವ ಸ್ಥಳಗಳಲ್ಲಿನ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹ, ಯಾರ ಜೊತೆಗಾದರೂ ನಂಟು, ಯಾವುದಾದರೂ ಅಪರಾಧ ಕೃತ್ಯಗಳಿಗೆ ಚಿಂತನೆ ನಡೆಸಿದ್ದಾರಾ ಎಂಬ ಕುರಿತು ಪರಿಶಿಲನೆ ನಡೆಸಿದರಲ್ಲದೇ, ರೌಡಿ ಶೀಟರ್ ಗಳಿಗೆ ಅಪರಾದ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಲ್ಲಿ ಕಠಿಣ ಶಿಕ್ಷೆ ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News