ಯೇಸುಕ್ರಿಸ್ತನ ಅವಹೇಳನ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕ್ರೈಸ್ತ ಸಂಘ ಆಗ್ರಹ

Update: 2018-12-30 12:37 GMT

ಚಿಕ್ಕಮಗಳೂರು, ಡಿ.30: ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಕ್ರೈಸ್ತ ಸಮುದಾಯ ಆರಾಧಿಸುವ ಯೇಸು ಕ್ರಿಸ್ತನ ಕುರಿತು ಅಶೀಲ್ಲವಾಗಿ ಅವಹೇಳನಕಾರಿ ಸಂಗತಿಗಳ ಫೋಟೊ ಹಾಕಿ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ರೂಬೆನ್ ಮೊಸಸ್ ನೇತೃತ್ವದಲ್ಲಿ ಸಮುದಾಯದ ಮುಖಂಡರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. 

ಕ್ರಿಸ್‍ಮಸ್ ಹಬ್ಬದಂದು ಫೇಸ್‍ಬುಕ್‍ನಲ್ಲಿ ರವೀಂದ್ರ ಗೌಡ ಪಾಟೀಲ್ ಹಾಗೂ ಬಜರಂಗದಳದ ರಾಕಿ ಹಿರೇಕೊಡಿಗೆ ಎಂಬವರು ಕ್ರಿಸ್ತನ ಬಗ್ಗೆ ಅಶ್ಲೀಲ ಚಿತ್ರಗಳನ್ನು ಹಾಕಿದ್ದು, ಕ್ರೈಸ್ತರು ಶಾಂತಿ ಪ್ರಿಯರು, ಯಾರ ತಂಟೆಗೂ ಹೋಗದೆ ಸಮಾಜದಲ್ಲಿ ಗೌರವವಾಗಿ ಜೀವಿಸುತ್ತಿದ್ದಾರೆ. ಕೆಲವು ಕಿಡಿ ಗೇಡಿಗಳು ಆಗಾಗ ಕ್ರೈಸ್ತ ಸಮುದಾಯದ ವಿರುದ್ಧ ಹೇಳಿಕೆಗಳನ್ನು ದೌರ್ಜನ್ಯವನ್ನು ಮಾಡುತ್ತಾ ಬಂದಿದ್ದು, ಶಾಂತಿಯನ್ನು ಕದಡುತ್ತಿದ್ದಾರೆ. ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಫೆಲಿಕ್ಸ್ ಸಿಕ್ವೇರ, ಉಪಾಧ್ಯಕ್ಷ ಸಿ.ಎಂ. ಜಾರ್ಜ್, ನಗರಸಭೆ ಸದಸ್ಯೆ ಹಾಗೂ ನಿರ್ದೇಶಕಿ ಸುರೇಖ ಸಂಪತ್‍ರಾಜ್, ಕಾರ್ಯದರ್ಶಿ ಜಾರ್ಜ್ ಸಿಕ್ವೇರ, ಕಾರ್ಯದರ್ಶಿ ಕಿರಣ್ ಡಿಸೋಜ, ನಿರ್ದೇಶಕರಾದ ಸಿಲ್ವಸ್ಟರ್, ಡೆನ್ನಿಸ್ ಫೆರ್ನಾಂಡಿಸ್, ಜೀನೋಫೆರೋ ಹಾಗೂ ಆಲ್ಬರ್ಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News