ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಧಾರವಾಡ ಜಿಲ್ಲಾಡಳಿತದಿಂದ ಪ್ರಚಾರ ಕಾರ್ಯ ಆರಂಭ
Update: 2018-12-30 21:29 IST
ಧಾರವಾಡ, ಡಿ.30: ಜ.4 ರಿಂದ 6ರ ವರೆಗೆ ನಡೆಯುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಜಿಲ್ಲಾಡಳಿತ ಸಾಕಷ್ಟು ಸಿದ್ಧತೆ ನಡೆಸಿದ್ದು, ಹೆಚ್ಚಿನ ಸಾಹಿತ್ಯಾಸಕ್ತರನ್ನು ಸೆಳೆಯುವುದಕ್ಕಾಗಿ ಪ್ರಚಾರದಲ್ಲಿ ತೊಡಗಿದೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮಹಾನಗರ ಪಾಲಿಕೆಯ ವಾಹನಗಳ ಮೂಲಕ ಸಾಹಿತ್ಯ ಸಮ್ಮೇಳನದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಸಾಹಿತ್ಯ ಸಮ್ಮೇಳನದ ಉದ್ದೇಶ, ಅದರಲ್ಲಿ ಭಾಗವಹಿಸುವ ಅಗತ್ಯತೆ ಕುರಿತು ಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ.
ಸಾಹಿತ್ಯದ ಸಮ್ಮೇಳನದಲ್ಲಿ ನಡೆಯವು ಉತ್ತರ ಕನಾಟಕ, ಹೈ-ಕರ್ನಾಟಕದ ಸಮಸ್ಯೆಗಳ ಕುರಿತು, ರೈತರು, ಮಹಿಳೆಯರ ಸಮಸ್ಯೆಗಳು ಹಾಗೂ ಅದರ ಪರಿಹಾರ ಕ್ರಮಗಳ ಕುರಿತು ನಡೆಯುವ ಸಂವಾದ ಗೋಷ್ಟಿ ಹಾಗೂ ಕನ್ನಡ ಭಾಷೆ, ಸಂಸ್ಕೃತಿ ಕುರಿತು ನಡೆಯುವ ವಿಚಾರ ಗೋಷ್ಟಿಗಳಲ್ಲಿ ಭಾಗವಹಿಸುವಂತೆ ಶಾಲಾ, ಕಾಲೇಜು ಸೇರಿದಂತೆ ಧಾರವಾಡ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಚಾರ ಕೈಗೊಳ್ಳಲಾಲಾಗುತ್ತಿದೆ.