ಯೋಗ ದೈನಂದಿನ ಅಭ್ಯಾಸವಾಗಲಿ: ರಾಮದೇವ್

Update: 2018-12-31 11:45 GMT

ವಿಜಯಪುರ, ಡಿ.31: ಯೋಗ ಜೀವನದ ದೈನಂದಿನ ಅಭ್ಯಾಸವಾಗಬೇಕು, ಬೇಗ ಮಲಗಬೇಕು, ಬೇಗ ಏಳಬೇಕು, ತಡವಾಗಿ ಏಳುವುದು ಪಾಪದ ಕೆಲಸ ಎಂದು ರಾಮಾಯಣ ಹೇಳುತ್ತದೆ, ಪ್ರತಿಯೊಬ್ಬರು ಬೆಳಗ್ಗೆ ಯೋಗಿಯಾಗಬೇಕು, ದಿನವಿಡೀ ಕರ್ಮಯೋಗಿಯಾಗಬೇಕು ಎಂದು ಯೋಗ ಗುರು ಬಾಬಾ ರಾಮದೇನ್ ಹೇಳಿದ್ದಾರೆ.

ಇಲ್ಲಿ ನಡೆದ ಭಾರತೀಯ ವಿಕಾಸ ಸಂಗಮದಲ್ಲಿ ಪಾಲ್ಗೊಂಡು ಯೋಗಾಸನಗಳನ್ನು ಪ್ರದರ್ಶಿ ಅವರು ಮಾತನಾಡುತ್ತಿದ್ದರು.

 ನಾನು ಕಳೆದ 40 ವರ್ಷಗಳಿಂದ ಒಂದೇ ಒಂದು ದಿನ ವಿಶ್ರಾಂತಿ ಪಡೆದುಕೊಂಡಿಲ. ಹಿಮಾಲಯಕ್ಕೂ ಹೋದರೂ ನನಗೆ ಚಳಿಯಾಗುವುದಿಲ್ಲ, ಇದಕ್ಕೆಲ್ಲಾ ನನಗೆ ಚೈತನ್ಯ ನೀಡಿದ್ದು ಯೋಗ ಹಾಗೂ ಪ್ರಾಣಾಯಾಮ ಎಂದು ರಾಮದೇವ್ ತಿಳಿಸಿದರು.

ಪ್ರತಿಯೊಬ್ಬರು ವ್ಯಕ್ತಿಯಾಗಿ ಬದುಕದೇ ಭಾರತವಾಗಿ ಬದುಕಬೇಕು, ಹಿಮಾಲಯವೇ ನನ್ನ ಶಿರ, ಉಳಿದವುಗಳೆಲ್ಲ ನನ್ನ ಬಲಭುಜ, ದೇಹದ ಅಂಗಗಳು ಎಂದು ಭಾವಿಸಿ. ಅಂತಹ ಸಂಕಲ್ಪಮಾಡಬೇಕು ಎಂದು ಕರೆ ನೀಡಿದರು. ಭಾರತೀಯ ಸಂಸ್ಕೃತಿ, ಧರ್ಮ ಅತ್ಯಂತ ಶ್ರೇಷ್ಠ. ಭಾರತೀಯ ಸಂಸ್ಕೃತಿ ಇಬ್ಬರು ಅಥವಾ ಮೂವರು ವ್ಯಕ್ತಿಗಳಿಗೆ ಸೀಮಿತವಾಗುವುದಿಲ್ಲ. ಪ್ರಪಂಚ ಬೇರೆ ಧರ್ಮದ ಸಂಸ್ಕೃತಿಗಳು ಕೇವಲ ಮೂರು ಅಥವಾ ನಾಲ್ಕು ವ್ಯಕ್ತಿಗಳಿಗೆ ಸೀಮಿತವಾಗುತ್ತದೆ ಎಂದವರು ನುಡಿದರು.

 ಕನ್ನಡದಲ್ಲಿ ಮಾತನಾಡಿದ ರಾಮದೇವ್
ಕನ್ನಡದಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ ರಾಮದೇವ್ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು. ‘ಕನ್ನಡದ ಸಮಸ್ತ ಸಹೋದರ-ಸಹೋದರಿಯರೇ ನಮಸ್ಕಾರ, ಕನ್ನಡಿಗರು ಸ್ವಭಾವ, ದೇಶಭಕ್ತಿ, ಆಧ್ಯಾತ್ಮಿಕವಾಗಿ ಶ್ರೀ ಮಂತರು...’ ಎಂದು ಕನ್ನಡದಲ್ಲಿಯೇ ಹೇಳಿದರು. ನನಗೂ ಕನ್ನಡ ಬರುತ್ತದೆ ಎಂದಾಗ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News