ಹಾಸನ: ಸಾಹಿತಿ ಭಗವಾನ್ ವಿರುದ್ಧ ದೂರು

Update: 2018-12-31 12:56 GMT

ಹಾಸನ, ಡಿ. 31: ಕೆ.ಎಸ್. ಭಗವಾನ್ ಎಂಬ ಸಾಹಿತಿ ಹಲವು ವರ್ಷಗಳಿಂದ ಸಮಾಜದಲ್ಲಿ ಕೋಮು ಭಾವನೆಗಳನ್ನು ಹರಡುತ್ತಾ ಅಶಾಂತಿ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಂಡು ಕೂಡಲೇ ಬಂಧಿಸಬೇಕೆಂದು ವಿಶ್ವಹಿಂದು ಪರಿಷದ್ ಮತ್ತು ಭಜರಂಗ ದಳದ ಕಾರ್ಯಕರ್ತರು ಬಡಾವಣೆ ಪೊಲೀಸ್ ಠಾಣೆಗೆ ಸೋಮವಾರ  ದೂರು ನೀಡಿದ್ದಾರೆ.

ಸಮಾಜದ ಶಾಂತಿಗೆ ಭಂಗ ಉಂಟು ಮಾಡುತ್ತಿರುವ ಸ್ವಯಂ ಘೋಷಿತ ಬುದ್ಧಿಜೀವಿ ಕೆ.ಎಸ್. ಭಗವಾನ್‍ನ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಭಗವಾನ್ ಎಂಬ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದು, ಹಲವಾರು ವರ್ಷಗಳಿಂದ ಸಮಾಜದಲ್ಲಿ ಕೋಮು ಭಾವನೆಗಳನ್ನು ಹರಡುತ್ತಾ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಸಮಾಜದ ಶಾಂತಿ ಕೆಡಿಸುತ್ತಿರುವ ಭಗವಾನ್ ಬಂಧನಕ್ಕೆ ಒತ್ತಾಯಿಸಿದರು.

ದೃಶ್ಯ ಮಾಧ್ಯಮಗಳಲ್ಲಿ ಸದಾ ಕಾಣಿಸಿ ಕೊಳ್ಳಬೇಕೆಂಬ ವಿಕೃತ ಚಟದಿಂದ ಈತ ಹೀಗೆ ಮಾನಸಿಕ ಅಸ್ವಸ್ಥನಂತೆ ನಡೆದುಕೊಳ್ಳುತ್ತಿರುವ ಪ್ರಚಾರದ ಸಲುವಾಗಿ ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡುತ್ತಲೇ ಇದ್ದಾನೆ. ಹಾಗಾಗಿ ಇನ್ನೊಮ್ಮೆ ಈ ರೀತಿ ಮಾಡದಂತೆ ಸರಿಯಾದ ಪಾಠ ಕಲಿಸಬೇಕು. ಈ ಹಿಂದೆಯೂ ಅಸಂಖ್ಯಾತ ಹಿಂದೂಗಳ ಆರಾಧ್ಯ ದೇವರಾದ ಆದರ್ಶ ಪುರುಷ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು
ನೀಡಿದ್ದು, ಈಗ ಆತ ಬರೆದಿರುವ ರಾಮ ಮಂದಿರ ಏಕೆ ಬೇಡ?’ ಎಂಬ ಪುಸ್ತಕದಲ್ಲಿ ಪ್ರಭು ಶ್ರೀ ರಾಮ ಒಬ್ಬ ಕುಡುಕ ರಾಮ, ಸೀತೆ ಮದ್ಯಪಾನ ಮಾಡುತ್ತಿದ್ದರು ಎಂದೆಲ್ಲಾ ಹಿಂದೂಗಳಿಗೆ ನೋವುಂಟು ಮಾಡುವಂತಹ ಬೇಕಾಬಿಟ್ಟಿ ಬರೆದಿದ್ದು, ಕೂಡಲೇ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಿತಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಶ್ವಹಿಂದು ಪರಿಷದ್ ಮತ್ತು ಭಜರಂಗ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ನವೀನ್ ಕುಮಾರ್, ಸಂಯೋಜಕ ಮುರುಳಿದರ್, ವಿದ್ಯಾರ್ಥಿ ಪರಿಷದ್ ಪ್ರಮುಖ ಚೇತನ್, ನಗರ ಸೇವಾ ಪ್ರಮುಖ್ ಪವನ್, ಪ್ರಶಾಂತ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News