×
Ad

ಜೆಡಿಎಸ್ ಶಾಸಕರ ನಾಯಕತ್ವದಲ್ಲೇ ಸಿಎಂ ಭೇಟಿ: ಎಚ್.ಎಚ್.ದೇವರಾಜ್

Update: 2018-12-31 18:31 IST

ಚಿಕ್ಕಮಗಳೂರು, ಡಿ.31: ಮುಂಬರುವ ನಗರಸಭೆ ಚುನಾವಣೆಯಲ್ಲಿ ಕೋಮುವಾದಿ ಪಕ್ಷಗಳನ್ನು ಮಣಿಸಲು ರಾಜ್ಯ ವರಿಷ್ಠರ ಸೂಚನೆಯಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳೊಂದಿಗೆ ಜೆಡಿಎಸ್ ಪ್ರತಿಷ್ಠೆಯನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದರು.

ನಗರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ಕರೆದಿದ್ದ ಸಭೆಗೆ ಜಿಲ್ಲೆಯ ಮುಖಂಡರಾದ ಎಸ್.ಎಲ್.ಭೋಜೇಗೌಡ, ಎಸ್.ಎಲ್.ಧರ್ಮೇಗೌಡ, ಬಿ.ಬಿ.ನಿಂಗಯ್ಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಆ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವಂತೆ ಮುಖಂಡರು ಸೂಚಿಸಿದ್ದಾರೆ ಎಂದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷವಾದ ಕಾಂಗ್ರೆಸ್ ಮುಖಂಡರಲ್ಲಿ ರಾಜ್ಯದಲ್ಲಿ 12 ಸಂಸದೀಯ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಕೇಳಿದ್ದು, ಅದರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಒಂದು ಎಂದರು.

ಶಾಸಕ ಸಿ.ಟಿ.ರವಿ ಕಳೆದ 15 ವರ್ಷಗಳಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ದೇವರಾಜ್, ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಕರಪತ್ರದಲ್ಲಿ ಎಂಜಿನಿಯರಿಂಗ್ ಕಾಲೇಜ್, ವೈದ್ಯಕೀಯ ಕಾಲೇಜ್ ಸೇರಿದಂತೆ ಹಲವು ಯೋಜನೆಗಳು ಅನುಷ್ಠಾನಗೊಂಡಿರುವ ಬಗ್ಗೆ ಮುದ್ರಿಸಿ ಪ್ರಚಾರ ಪಡೆದಿದ್ದರು. ಆದರೆ ಈಗ ಅಭಿವೃದ್ಧಿ ವಿಚಾರ ಚರ್ಚಿಸಲು ಸಭೆಗಳನ್ನು ಕರೆಯುತ್ತಿದ್ದಾರೆ. ಹಾಗಾದರೇ ಕರಪತ್ರದಲ್ಲಿದ್ದ ಅಭಿವೃದ್ಧಿ ಎಲ್ಲಿಗೆ ಹೋಯಿತು? ಅದು ಸುಳ್ಳಾ? ಎಂದು ಎಂದು ಪ್ರಶ್ನಿಸಿದ ಅವರು, ಶಾಸಕ ಅವಧಿಯಲ್ಲಿ ಜಾರಿಯಾದ ಐಜಿ ರಸ್ತೆ, ಎಂಜಿ ರಸ್ತೆ ಕಾಮಗಾರಿಗಳು, ಅಮೃತ್ ಯೋಜನೆ, ಒಳಚರಂಡಿ ಯೋಜನೆಗಳು ಹಳ್ಳ ಹಿಡಿದಿವೆ. 15 ವರ್ಷಗಳ ಅವಧಿಯಲ್ಲಿ ಮಂತ್ರಿಯೂ ಆಗಿದ್ದ ಅವರಿಂದ ಈ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಮಾಡಿಸುವ ಅವಕಾಶವಿತ್ತು. ಆದರೆ ಮುಂಬರುವ ಚುನಾವಣಾ ರಾಜಕೀಯದ ಲಾಭಕ್ಕಾಗಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆಯ ನಾಟಕವಾಡುತ್ತಿದ್ದಾರೆ. ಸಂಘ ಸಂಸ್ಥೆಗಳನ್ನು ಎತ್ತಿಕಟ್ಟುವ ಹುನ್ನಾರ ಮಾಡುತ್ತಿದ್ದಾರೆಂದು ದೇವರಾಜ್ ಟೀಕಿಸಿದರು.

ಇತ್ತೀಚೆಗೆ ಶಾಸಕ ಸಿ.ಟಿ.ರವಿ ನಗರದಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ವಿವಿಧ ಪಕ್ಷಗಳ ಸಭೆ ಕರೆದಿದ್ದರು. ಸಭೆಯಲ್ಲಿ ಭಾಗವಹಿಸಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡರವರ ನೇತೃತ್ವದಲ್ಲಿ ನಿಯೋಗ ತೆರಳಲು ಸಿದ್ಧರಿರುವ ಬಗ್ಗ್ಧೆವರಿಗೆ ಹೇಳಿದ್ದೆ, ಆದರೆ ಅದನ್ನು ಕೆಲವು ಮಾಧ್ಯಮಗಳು ತಿರುಚಿದ್ದು, ಸಿಟಿ ರವಿ ನೇತೃತ್ವದಲ್ಲಿ ನಿಯೋಗ ಹೋಗುವುದಾಗಿ ಹೇಳಿದ್ದೇನೆಂದು ಬರೆಯಾಗಿದೆ. ನಾನು ಹಾಗೆ ಹೇಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಗೋಷ್ಠಿಯಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಮಂಜಪ್ಪ, ಮಹಾಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಅಲ್ಪಸಂಖ್ಯಾತರ ಘಟಕದ ಮುಖಂಡ ಜಮೀಲ್‍ಅಹಮದ್, ಯುವ ಜನತಾದಳದ ಕಸಬಾ ಹೋಬಳಿ ಅಧ್ಯಕ್ಷ ರಂಜನ್ ಉಪಸ್ಥಿತರಿದ್ದರು.

''ಮುಂಬರುವ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪಕ್ಷದ ಎಲ್ಲಾ ವರಿಷ್ಠರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿ ನಿಂದ ಚುನಾವಣೆಗೆ ಸಿದ್ಧತೆ ನಡೆಸುತ್ತೇವೆ. ಈ ನಿಟ್ಟಿನಲ್ಲಿ ಜನವರಿ 15-16ರಂದು ಜಿಲ್ಲೆಯ ಜೆಡಿಎಸ್‍ನ ಜನಪ್ರತಿನಿಧಿಗಳ ಸಭೆ ಆಯೋಜಿಸಲಾಗಿದ್ದು, ಈ ಸಭೆಗೆ ಜೆಡಿಎಸ್ ಮುಖಂಡರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ಜನವರಿ 3ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠರು ಸಭೆ ಕರೆದಿದ್ದು, ಅದರಲ್ಲಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆಯಾಗಲಿದೆ.''

-  ರಂಜನ್ ಅಜಿತ್‍ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News