ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವುದಾಗಿ ಕರೆಸಿ ಸುಲಿಗೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಶಿಕ್ಷೆ ಪ್ರಕಟ
ದಾವಣಗೆರೆ,ಜ.3: ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವುದಾಗಿ ಕರೆಸಿ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳಿಗೆ ಒಂದನೇ ಜೆಎಂಎಫ್‍ಸಿ ನ್ಯಾಯಾಲಯ ಎರಡು ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.
ಮುಂಬೈ ಗೋರೆಗಾಂವ್ ನಿವಾಸಿ ದತ್ತಾತ್ರೇಯ ಶಾಂತರಾಮ್ ಕರಾಡ್ಕರ್ ತಿರುಪತಿಗೆ ಹೋಗಿದ್ದ ಸಂದರ್ಭ ಇಲ್ಲಿನ ಅಂಬೇಡ್ಕರ್ ನಗರ ನಿವಾಸಿ ನಾಗರಾಜ್ ತಿರುಪತಿಯಲ್ಲಿ ಪರಿಚಿತರಾಗಿದ್ದರು. ಆನಂತರ ದಾವಣಗೆರೆಗೂ ಬನ್ನಿ ಎಂದು ಆಹ್ವಾನಿಸಿದ್ದರಿಂದ 2011ರ ಸೆಪ್ಟೆಂಬರ್ ನಲ್ಲಿ ಮುಂಬೈಯಿಂದ ಪತ್ನಿ ಜತೆಗೆ ಬಂದಿದ್ದರು. ಅವರಿಗೆ ಲಾಡ್ಜ್ ನಲ್ಲಿ ಕೊಠಡಿ ಮಾಡಿಕೊಟ್ಟದ್ದ ನಾಗರಾಜ್ ಮರುದಿನ ಆಟೊದಲ್ಲಿ ಕರೆದುಕೊಂಡು ಹೋಗಿ ಶ್ರೀರಾಮನಗರದ ರಘು, ಗುಂಡಮ್ಮ ಮತ್ತು ರಾಮನಗರದ ರವಿ ಜತೆ ಸೇರಿ ಹಲ್ಲೆ ನಡೆಸಿ 59 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು, ಮೊಬೈಲ್, ದಾಖಲಾತಿ ಪತ್ರ ಇದ್ದ ವ್ಯಾನಿಟಿ ಬ್ಯಾಗ್ ಸಹಿತ ಕಿತ್ತುಕೊಂಡು ಹೋಗಿದ್ದರು ಎನ್ನಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.