ವಿಜಯಪುರದಲ್ಲಿ ಮುಂದುವರೆದ ಸರಣಿ ಕಳ್ಳತನ: ನಗದು, ಚಿನ್ನಾಭರಣ ದರೋಡೆ
Update: 2019-01-03 23:48 IST
ವಿಜಯಪುರ,ಜ.3: ಭೀಮಾತೀರದಲ್ಲಿ ಸರಣಿ ಕಳ್ಳತನ ಮತ್ತೆ ಮುಂದುವರೆದಿದೆ. ಹೊಸ ವರ್ಷದ ದಿನದಂದೇ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ದರೋಡೆ ಮಾಡಿದ್ದ ಕಳ್ಳರು, ಇಂದು ಇಂಡಿ ಪಟ್ಟಣದಲ್ಲಿ ತಮ್ಮ ಕೈಚಳ ತೋರಿಸಿದ್ದಾರೆ.
ಪಟ್ಟಣದ ಕೆಇಬಿ ಹಿಂಬಾಗದಲ್ಲಿ ಸರಣಿ ಮನೆ ಕಳ್ಳತನ ನಡೆಸಿದ್ದು, ಶ್ರೀಕಾಂತ ಕುಲಕರ್ಣಿಯವರಿಗೆ ಸೇರಿದ 50 ಸಾವಿರ ನಗದು ಮತ್ತು 2 ತೊಲೆ ಬಂಗಾರ ಕಳವು ಮಾಡಿದ್ದಾರೆ. ಅಲ್ಲದೇ, ಕೆಇಬಿ ಗಲ್ಲಿಯಲ್ಲಿ ಇನ್ನೂ ನಾಲ್ಕೈದು ಮನೆಗಳನ್ನು ಕಳ್ಳತನ ಮಾಡಿದ್ದಾರೆ.
ಅಲ್ಲದೆ ಒಂದು ಕುರಿಯನ್ನು ಕದಿಯಲು ಹೋಗಿ ಸಾಯಿಸಿ ಬಿಟ್ಟು ಹೋಗಿದ್ದಾರೆ. ಸರಣಿ ಗಳ್ಳತನ ಪ್ರಕರಣಗಳು ವಿಜಯಪುರ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.