ಪ್ರಸಾದಕ್ಕೆ ವಿಷ ಹಾಕಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು: ಜ್ಞಾನಪ್ರಕಾಶ ಸ್ವಾಮೀಜಿ

Update: 2019-01-04 18:12 GMT

ಹನೂರು,ಜ.4: ಪ್ರಸಾದಕ್ಕೆ ವಿಷ ಹಾಕಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಉಚ್ಚ ನ್ಯಾಯಾಲಯ ಅಥವಾ ಜಿಲ್ಲಾ ನ್ಯಾಯಾಲಯಗಳಲ್ಲಿ ಯಾರೂ ಕೂಡ ಅವರ ಪರ ವಕಾಲತ್ತು ವಹಿಸಬಾರದು ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹಿಸಿದರು.

ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ನಂತರ ಅವರು ಮಾತನಾಡಿದರು. ಸರ್ಕಾರ ನೀಡಿರುವ 5 ಲಕ್ಷ ಪರಿಹಾರ ಜೊತೆಗೆ ಜಿಲ್ಲಾಧಿಕಾರಿ ದೇವಸ್ಥಾನನದಲ್ಲಿರುವ 60 ಲಕ್ಷ ರೂಪಾಯಿಗಳನ್ನು ಮುಟ್ಟುಗೋಲು ಮಾಡಿ ಸಂತ್ರಸ್ತರಿಗೆ ನೀಡಬೇಕು. ಸರ್ಕಾರ ಆರೋಪಿಗಳ ಆಸ್ತಿ ಪಾಸ್ತಿಗಳನ್ನು ವಶಕ್ಕೆ ಪಡೆದು ಮೃತಪಟ್ಟ ಕುಟುಂಬಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಮನುಷ್ಯರ ಜಾತಿಗೆ ಸೇರದೆ ಮೃಗಗಳಾಗಿ ಪ್ರಸಾದದಲ್ಲಿ ವಿಷ ಹಾಕಿರುವ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಪ್ರಸಾದ ಸೇವಿಸಿ ಮೃತಪಟ್ಟಿರುವ ಕುಟುಂಬಗಳ ಸಮಸ್ಯೆ ಬಗ್ಗೆ ಸರ್ಕಾರದ ಮಂತ್ರಿಗಳ ಜೊತೆ ಚರ್ಚಿಸಿ ಮೃತಪಟ್ಟಕುಟುಂಬಗಳಿಗೆ ಜಮೀನು ಉದ್ಯೋಗ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವವರು ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಶ್ರಮಿಸಬೇಕು. ಜಿಲ್ಲಾಡಳಿತ ಈಗಾಗಲೇ ಈ ಭಾಗದಲ್ಲಿ ಆಗಬೇಕಿರುವ ಅಭಿವೃದ್ಧಿ ಬಗ್ಗೆ ಪಟ್ಟಿ ಮಾಡಿದೆ. ಇದರ ಜೊತೆಗೆ ಇನ್ನು ಯಾವ್ಯಾವ ಸೌಲಭ್ಯಗಳನ್ನು ನೀಡಬೇಕು ಎಂದು ಪಟ್ಟಿ ನೀಡಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದ ಚಿತ್ರದುರ್ಗದ ಹರಳಯ್ಯ ಮಠದ ಸ್ವಾಮೀಜಿ, ಸಿದ್ದರಾಮ ಸ್ವಾಮೀಜಿ, ನರಸೀಪುರ ಆನಂದ ಬಂತೇಜಿ, ನಾಗೀದೇವಸ್ವಾಮಿ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಅರಕಲವಾಡಿ ನಾಗೇಂದ್ರ, ನಿಜಧ್ವನಿ ಗೋವಿಂದರಾಜು, ಪುರುಷೋತ್ತಮ್ ರಾಟೆ, ಡಿಎಎಸ್ ಲಿಂಗರಾಜು, ಮಹಮದ್ ಖಿಜರ್, ಪರ್ವತ್‍ ರಾಜ್, ಶೇಖರ್ ಬುದ್ಧ, ಬ್ಯಾಡಮೂಡ್ಲು ಬಸವಣ್ಣ ಸೇರಿದಂತೆ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News